ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಾಪುರ ಗ್ರಾಮದ ಬಳಿ ಜನರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆಯನ್ನು ಇಂದು(ಸೆ.7) ಕೊನೆಗೂ ಸೆರೆ ಹಿಡಿಯಲಾಗಿದೆ.
ಒಂದು ವಾರದಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಮಾದಾಪುರ ಬಳಿ ಸೆರೆಹಿಡಿಯಲಾಗಿದೆ. ಮಾದಾಪುರ ಗ್ರಾಮದ ಕೊಟ್ಟಿಗೆಯೊಂದರಲ್ಲಿ ಕಟ್ಟಿ ಹಾಕಿದ್ದ ಕುರಿಯನ್ನು ಹತ್ತಿರದ ಅರಣ್ಯಕ್ಕೆ ಎಳೆದೊಯ್ದು ತಿಂದು ಹಾಕಿತ್ತು. ಜನರು ಅರಣ್ಯ ಇಲಾಖೆಗೆ ಒತ್ತಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾದಾಪುರ ಗ್ರಾಮದ ಸರಹದ್ದಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನನ್ನು ಇಟ್ಟಿದ್ದರು.
ಇಂದು ಸೆರೆ ಸಿಕ್ಕ ಚಿರತೆಯನ್ನು ಶಿವಮೊಗ್ಗದ ತಾವರೆಕೊಪ್ಪ ಸಿಂಹದಾಮಕ್ಕೆ ಹೆಚ್ಚಿನ ನಿಗಾಕ್ಕಾಗಿ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಚೇತನ್.ಕೆ.ಆರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಫಾರೆಸ್ಟರ್ ಕೃಷ್ಣ ಮೂರ್ತಿ, ವನಪಾಲಕರು ಮತ್ತು ಪೊಲೀಸರು ಇದ್ದರು.



