ಡಿವಿಜಿ ಸುದ್ದಿ, ಹರಿಹರ: ಯುವಕರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು ಅಂತಾ ಸಮಾಜ ಪರವಾಗಿ ಹೋರಾಟ ಮಾಡಿದ್ದಕ್ಕೆ ಜನ ನನ್ನ ಮಗ್ಗಲು ಮುರಿದು, ಸೋಲಿಸಿ ಸುಣ್ಣ ಮಾಡ್ಯಾರ ಅಂತಾ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಕುರಿತು ಮಾಜಿ ಸಚಿವ ವಿನಯ್ ಕುಲಕರ್ಣಿ ಮೆಲುಕು ಹಾಕಿದ್ರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಉದ್ಯೋಗ ಸಮಸ್ಯೆ ಬಹಳ ಇದೆ. ನಮ್ಮ ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗುವ ಸಲುವಾಗಿಯೇ ನಾವು ಹೋರಾಟ ಮಾಡಿದ್ವಿ. ಆದ್ರೆ, ನಾವು ಹೋರಾಟ ಮಾಡಿದ್ದಕ್ಕೆ ಜನ ನನ್ನ ಮಗ್ಗಲು ಮುರಿದು, ಸೋಲಿಸಿ ಸುಣ್ಣ ಮಾಡಿದ್ರು.
ನಾನು ನನ್ನ ಸ್ವಂತ ಹಿತಾಸಕ್ತಿಗೋಸ್ಕರ ಹೋರಾಟ ಮಾಡಿರಲಿಲ್ಲ. ಸಮಾಜಕ್ಕೋಸ್ಕರ ಹೋರಾಟ ಮಾಡಿದ್ದೇವು. ಆದರೆ, ಎಲ್ಲರು ಹುನ್ನಾರ ನಡೆಸಿ ನಮ್ಮನ್ನು ಸೋಲಿಸಿದರು. ನಮ್ಮ ಸಮಾಜ ಕೂಡ ಮುಂದಿನ ದಿನಗಳಲ್ಲಿ ದಿಟ್ಟ ನಿರ್ಧಾರ ತಗೆದುಕೊಳ್ಳಲಿದೆ. ಸ್ವಾಮೀಜಿ ಯಾವುದೇ ನಿರ್ಧಾರ ತಗೆದುಕೊಂಡರು ನಾವು ಅವರ ಜೊತೆ ಇರುತ್ತೇವೆ ಎಂದರು.



