ಭದ್ರಾವತಿ: ಭದ್ರಾ ಜಲಾಶಯ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಆಗುತ್ತಿದ್ದು, ಒಳ ಹರಿವಿನ ಪ್ರಮಾಣ ಸ್ವಲ್ಪ ಏರಿಕೆಯಾಗಿದೆ. ಡ್ಯಾಂಗೆ ಇಂದು (ಆ.06) ಬೆಳಗ್ಗೆ 6 ಗಂಟೆ ವೇಳೆಗೆ 6,975 ಕ್ಯೂಸೆಕ್ ಒಳ ಹರಿವಿದೆ. ಇಂದಿನ ನೀರಿನ ಮಟ್ಟ 165.7 ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 184.4 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಇದಲ್ಲದೆ ಡ್ಯಾಂ ನಿಂದ ನಾಲೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿತ್ತು.
ಈ ವರ್ಷ ಜೂನ್ ನಲ್ಲಿ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ನೀರು ಸಂಗ್ರಹ ಕುಸಿದಿದೆ. ಕಳೆದ ವರ್ಷದ ಈ ದಿನಕ್ಕೆ ಹೋಲಿಸಿದ್ದರೆ 19 ಅಡಿಯಷ್ಟು ನೀರು ಕೊರತೆಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಭದ್ರಾ ಡ್ಯಾಂ ತುಂಬಾದಿದ್ದರಿಂದ ಅಚ್ಚುಕಟ್ಟು ಪ್ರದೇಶದ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಕಳೆದ 15 ದಿನದ ಹಿಂದೆ ಉತ್ತಮ ಮಳೆಯಾಗಿತ್ತು. ಇದೀಗ ಮತ್ತೆ ಮಳೆ ತಗ್ಗಿದೆ. ಇಂದು 6 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳ ಹರಿವಿದ್ದು, ಡ್ಯಾಂ ತುಂಬುವ ಭರವಸೆ ಇದೆ. ಭರ್ತಿಗೆ 21 ಅಡಿ ಮಾತ್ರ ಬಾಕಿ ಇದೆ.
ಭದ್ರಾ ಅಚ್ಚುಕಟ್ಟು ಪ್ರದೇಶ ರೈತರಿತ ಸಭೆ ಆಗಸ್ಟ್ ಮೊದಲ ವಾರದಲ್ಲಿ ನಡೆಯಲಿದ್ದು, ಅಂದೇ ನೀರು ಬಿಡುಗಡೆ ದಿನ ನಿಗದಿ ಮಾಡಲಾಗುವುದು ಎಂದು ದಾವಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದರು.ಆದರೆ, ನೀರು ಬಿಡುವ ಮುನ್ಸೂಚನೆ ಸಿಕ್ಕಿಲ್ಲ.
- ಡ್ಯಾಂ ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 165.7 ಅಡಿ
- ಪೂರ್ಣ ನೀರಿನ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 48.316 ಟಿಎಂಸಿ
- ಒಟ್ಟು ಸಾಮರ್ಥ್ಯ: 71.535 ಟಿಎಂಸಿ
- ಒಳ ಹರಿವು: 6975 ಕ್ಯೂಸೆಕ್
- ಒಟ್ಟು ಹೊರ ಹರಿವು: 193 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್
- ಎಡದಂಡೆ ನಾಲೆ: 0.00 ಕ್ಯೂಸೆಕ್
- ಕಳೆದ ವರ್ಷ ಈ ದಿನ : 184.4 ಅಡಿ



