ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಇಂದಿನಿಂದ (ಆ.1) ರ ವಾಣಿಜ್ಯ ಬಳಕೆಯ19 ಕೆಜಿಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂ. ಇಳಿಕೆ ಮಾಡಿವೆ.
ಬೆಲೆ ಇಳಿಕೆ ನಂತರದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1680 ರೂ. ಆಗಿದೆ. ಕಳೆದ ತಿಂಗಳು ಜುಲೈ 4ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 7 ರೂ.ಗೆ ಹೆಚ್ಚಿಸಲಾಗಿತ್ತು. ಇನ್ನೂ ಕೋಲ್ಕತ್ತಾದಲ್ಲಿ 1802.50 ರೂ. ಇದ್ದರೆ, ಮುಂಬೈನಲ್ಲಿ 1640.50 ರೂ., ಚೆನ್ನೈನಲ್ಲಿ 1852.50 ರೂ. ಇದೆ.
ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಸಿಲಿಂಡರ್ ದೆಹಲಿಯಲ್ಲಿ 1103 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಸಿಲಿಂಡರ್ ಬೆಲೆಯಲ್ಲಿ ಮಾರ್ಚ್ 1, 2023 ರಂದು ಕೊನೆಯಲಾಗಿ ಬದಲಾಗಿತ್ತು.



