Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಇಂದಿನ ದರದಲ್ಲಿ ಮತ್ತೆ ಏರಿಕೆ; ರಾಶಿ ಅಡಿಕೆ ಕ್ವಿಂಟಾಲ್ 57,399 ರೂ.ಗೆ ಮಾರಾಟ

IMG 20230712 164830

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ಇಂದಿನ ದರದಲ್ಲಿ ಮತ್ತೆ ಏರಿಕೆ; ರಾಶಿ ಅಡಿಕೆ ಕ್ವಿಂಟಾಲ್ 57,399 ರೂ.ಗೆ ಮಾರಾಟ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ಚೇತರಿಕೆ ಕಂಡಿದೆ. ಅಡಿಕೆಗೆ ಜಾಕ್ ಪಾಟ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ವರಿ 57,399 ರೂ. ತಲುಪಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಇದೀಗ 57 ಸಾವಿರ ಗಡಿ ದಾಟಿದೆ. ಕಳೆದ ವರ್ಷ ಗರಿಷ್ಠ 60 ಸಾವಿರಕ್ಕೆ ಮಾರಾಟವಾಗಿತ್ತು. ಈ ವರ್ಷವು ಸಹ 60 ಸಾವಿರ ಸಮೀಪ ಬಂದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ.

ಇಂದು (ಜು.12) ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 57,399 ರೂ.ಗೆ ಮಾರಾಟವಾಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ 200 ರೂ. ಏರಿಕೆ ಕಂಡಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ಅಡಿಕೆ ವಹಿವಾಟಿನಲ್ಲಿ ಜು.12ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 53,099 ಗರಿಷ್ಠ ಬೆಲೆ 57,399 ಹಾಗೂ ಸರಾಸರಿ ಬೆಲೆ 55,443 ರೂ. ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ 42,099 ರೂ.ಗೆ ಮಾರಾಟವಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top