ದಾವಣಗೆರೆ; ಬಾಡಿಗೆ ಮನೆಯೊಂದರಲ್ಲಿ ಬೇರೆ ಕಡೆಯಿಂದ ಹೆಣ್ಣು ಮಕ್ಕಳನ್ನು ಕರೆಸಿ ಅಕ್ರಮ ವೇಶ್ಯವಾಟಿಕೆ ದಂದೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಆರೋಪಿಗಳು ಸೇರಿ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ.
ನಿನ್ನೆ (ಜು.10) ಸಂಜೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾವಣಗೆರೆ ಪಿಜೆ ಬಡಾವಣೆ 3ನೇ ಮೇನ್ ನಲ್ಲಿರುವ ಮೆಮೋರಿಯಲ್ ಆಸತ್ರೆ ಪಕ್ಕದಲ್ಲಿರುವ ಮನೆಯೊಂದರಲ್ಲಿ ಹೆಣ್ಣು ಮಕ್ಕಳನ್ನು
ಹಣದ ಆಮಿಷ ಒಡ್ಡಿ ಬೇರೆ ಕಡೆಯಿಂದ ಕರೆಯಿಸಿಕೊಂಡು ಅಕ್ರಮ ವೇಶ್ಯವಾಟಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಖಚಿತ
ಮಾಹಿತಿ ಮೇರೆಗೆ ದಾಳಿ ನಡೆದಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ನಗರ ಉಪವಿಭಾಗ ಪೊಲೀಸ್
ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪಿಐ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಬಡಾವಣೆ ಪಿಎಸ್‌ಐ ರವರುಗಳು ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ದಾಳಿ ಮಾಡಲಾಗಿದೆ.
ದಾವಣಗೆರೆ ನಗರದ ಪಿ. ಜೆ ಬಡಾವಣೆ 3ನೇ ಮೇನ್, ಕೆಸಿ ಮೆಮೋರಿಯಲ್ ಆಸ್ಪತ್ರೆ ಪಕ್ಕದ ಮನೆಯ 2ನೇ ಮಹಡಿಯಲ್ಲಿರುವ ಮನೆಯನ್ನು ಬಾಡಿಗೆ ಪಡೆದು ಅಕ್ರಮವಾಗಿ ವೇಶ್ಯವಾಟಿಗೆ ನಡೆಸುತ್ತಿರುವುದು ಕಂಡು ಬಂದಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಬಳಿ ಒಟ್ಟು 35,100/- ನಗದು ಹಣದೊರತಿದ್ದು, ಆರೋಪಿತರು ವೇಶ್ಯವಾಟಿಕೆ ನಡೆಸುತ್ತಿದ್ದರಿಂದ ದಾವಣಗೆರೆ ಮಹಿಳಾ ಪೊಲೀಸ್ ಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.



