ದಾವಣಗೆರೆ: ಭದ್ರಾ ಜಲಾಶಯದ ಪ್ರದೇಶ ಸುತ್ತಮುತ್ತ ಮಳೆ ಪ್ರಮಾಣ ತಗ್ಗಿದೆ. ಇದರಿಂದ ಒಳ ಹರಿವು ಸಹ ಇಳಿಮುಖವಾಗಿದೆ. ಇಂದು (ಜು.09) 4,769 ಕ್ಯೂಸೆಕ್ ಒಳ ಹರಿವಿದೆ. ನಿನ್ನೆ 6,039 ಕ್ಯೂಸೆಕ್ ಒಳ ಹರಿವು ಇತ್ತು. ಇಂದಿನ ನೀರಿನ ಮಟ್ಟ 140 03 ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 168.8 ಅಡಿಯಷ್ಟು ನೀರು ಸಂಗ್ರಹವಾಗಿತ್ತು.
ಈ ವರ್ಷ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಕಳೆದ ವರ್ಷದ ಈ ದಿನಕ್ಕೆ ಹೊಲಿಸಿದ್ದರೆ 28 ಅಡಿಯಷ್ಟು ನೀರು ಕೊರತೆಯಲ್ಲಿದೆ. ಹೀಗಾಗಿ ಭದ್ರಾ ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದ ಹಿನ್ನೆಲೆ ದಾವಣಗೆರೆ ಜಿಲ್ಲೆ ರೈತರು, ಮುಂಗಾರು ಭತ್ತ ನಾಟಿಗೆ ಬೀಜ ಚೆಲ್ಲುವುದಕ್ಕೆ ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
- ಡ್ಯಾಂ ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 140.3 ಅಡಿ
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 22,879 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 4,769 ಕ್ಯೂಸೆಕ್
- ಒಟ್ಟು ಹೊರಹರಿವು: 162 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್
- ಎಡದಂಡೆ ನಾಲೆ: 0.00ಕ್ಯೂಸೆಕ್
- ಕಳೆದ ವರ್ಷ ಈ ದಿನ : 168.8ಅಡಿ



