Connect with us

Dvgsuddi Kannada | online news portal | Kannada news online

ಸಿಎಂ ಸಿದ್ದರಾಮಯ್ಯ ಮಂಡಿಸಿದ ಮಧ್ಯಂತರ ಬಜೆಟ್ ಗಾತ್ರ ಎಷ್ಟು..? ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆ; ಇಲಾಖೆವಾರು ವಿವರ ಇಲ್ಲಿದೆ….

n516289526168873043869974d9f16d557c3bae8be157d558622b0d82458ae028e0b2ee0384271233410bf6

ಪ್ರಮುಖ ಸುದ್ದಿ

ಸಿಎಂ ಸಿದ್ದರಾಮಯ್ಯ ಮಂಡಿಸಿದ ಮಧ್ಯಂತರ ಬಜೆಟ್ ಗಾತ್ರ ಎಷ್ಟು..? ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆ; ಇಲಾಖೆವಾರು ವಿವರ ಇಲ್ಲಿದೆ….

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಜು.07) 2023-24 ರ ಸಾಲಿನ ಮಧ್ಯಂತರ ಬಜೆಟ್​ ಮಂಡಿಸಿದರು. ಕಲ್ಯಾಣ ರಾಜ್ಯದ ಕನಸಿನ ಬಜೆಟ್ ಅನ್ನು ಮಂಡಿಸಿರುತ್ತಿರುವುದಾಗಿ ಹೇಳಿದ ಅವರು, 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಬಜೆಟ್​ ಮಂಡನೆ ವೇಳೆ ಈ ಹಿಂದಿನ ಸರ್ಕಾರವನ್ನು ಟೀಕಿಸಿದರು.ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿದೆ ಎಂದು ದೂರಿದರು.

ಈ ಬಜೆಟ್​ನ ಗಾತ್ರ ಬಜೆಟ್​​ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂ ಆಗಿದೆ. ಇನ್ನು ಈ ಬಜೆಟ್​​ನಲ್ಲಿ ವಿವಿಧ ಕ್ಷೇತ್ರಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಇಲಾಖೆವಾರು ಹಂಚಿಕೆ ಮತ್ತು ಆದಾಯದ ವಿವರ ಇಲ್ಲಿದೆ.

  • ಅನಯದಾನ ಹಂಚಿಕೆ
  • ಶಿಕ್ಷಣ ಇಲಾಖೆ : 37597 ಕೋಟಿ ರೂ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24166 ಕೋಟಿ ರೂ.
  • ಇಂಧನ ಇಲಾಖೆ 22.773 ಕೋಟಿ ರೂ
  • ನಗರಾಭಿವೃದ್ಧಿ ಮತ್ತು ನೀರಾವರಿ ಇಲಾಖೆ: 19.44 ಕೋಟಿ ರೂ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ: 18 .38 ಕೋಟಿ ವೆಚ್ಚ
  • ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16. 638 ಕೋಟಿ ರೂ.ವೆಚ್ಚ
  • ಕಂದಾಯ ಇಲಾಖೆಗೆ: 16167 ಕೋಟಿ ರೂ. ಅನುದಾನ ಹಂಚಿಕೆ
  • ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14 950 ಕೋಟಿ ರೂ.ವೆಚ್ಚ
  • ಸಮಾಜ ಕಲ್ಯಾಣ ಇಲಾಖೆ: 11.173 ಕೋಟಿ ರೂ.
  • ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ: 10460 ಕೋಟಿ ರೂ.
  • ಲೋಕೋಪಯೋಗಿ ಇಲಾಖೆಗೆ: 10143 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ: 5 860 ಕೋಟಿ ರೂ.
  • ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 324 ಕೋಟಿ ರೂ.

ಆದಾಯದ ಸಂಗ್ರಹ

  • ವಾಣಿಜ್ಯ ತೆರಿಗೆಗಳಿಂದ (ಜಿಎಸ್​ಟಿ ಸೇರಿ) 1.1000 ಕೋಟಿ ಆದಾಯ ನಿರೀಕ್ಷೆ
  • ಅಬಕಾರಿ ಇಲಾಖೆಯಿಂದ 36.000 ಕೋಟಿ ರೂ
  • ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ 25000 ಕೋಟಿ ರೂ
  • ಮೋಟಾರು ವಾಹನ ತೆರಿಗೆಗಳಿಂದ 11.500 ಕೋಟಿ ರೂ
  • ಇತರೆ ತೆರಿಗೆಯಿಂದ 2153 ಕೋಟಿ ರೂ
  • ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 9.000 ಕೋಟಿ,

ಒಟ್ಟು 2,38,410 ಕೋಟಿ ರೂ ರಾಜಸ್ವ ಜಮೆ. ಸ್ವಂತ ತೆರಿಗೆ, ಜಿಎಸ್​ಟಿ ಪರಿಹಾರ ಎಲ್ಲವನ್ನು ಒಳಗೊಂಡಂತೆ 1.75,653 ಕೋಟಿ ಸಂಗ್ರಹ. ತೆರಿಗೆಯೇತರ ರಾಜಸ್ವಗಳಿಂದ ಸಂಗ್ರಹ 12.500 ಕೋಟಿ ರೂ. ಆಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top