ದಾವಣಗೆರೆ: ಚನ್ನಗಿರಿ ಪಟ್ಟಣದ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ಕೈಗೊಂಡು 51 ಪ್ರಕರಣಗಳನ್ನು ದಾಖಲಿಸಿ ರೂ.10,200 ದಂಡ ವಿಧಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಚನ್ನಗಿರಿ ವಲಯದಲ್ಲಿ ತಂಬಾಕು ದಾಳಿ ಕೈಗೊಂಡು ಬಾರ್ & ರೆಸ್ಟೊರೆಂಟ್‍ಗಳ ಮಾಲಿಕರು ಹಾಗೂ ವೆಂಡರ್‍ಗಳಿಗೆ ಸಪ್ಲಾಯರ್ಸ್‍ಗಳ ಕಡೆಯಿಂದ ಸಿಗರೇಟು ಮತ್ತು ಬೀಡಿಗಳನ್ನು ಸಪ್ಲಾಯ ಮಾಡಿಸುವಂತಿಲ್ಲ ಮತ್ತು ಟೇಬಲ್‍ಗಳ ಮೇಲೆ ಆಶ್ ಟ್ರೇ, ಲೈಟರ್, ಬೆಂಕಿಪೊಟ್ಟನಗಳನ್ನು ಇಡುವಂತಿಲ್ಲ ಹಾಗೂ ಕಡ್ಡಾಯವಾಗಿ ಧೂಮಪಾನ ನಿಷೇಧಿತ ಪ್ರದೇಶದ ನಾಮಫಲಕ ಅಳವಡಿಸಬೇಕೆಂದು ಸೂಚಿಸಿದರು.
ದಾಳಿಯಲ್ಲಿ ಚನ್ನಗಿರಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶಿವಕುಮಾರ, ಅಬಕಾರಿ ನಿರೀಕ್ಷಕರಾದ ಜಾನ್ ಪಿ.ಜೆ, ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಸಮಾಜ ಕಾರ್ಯಕರ್ತರಾದ ದೇವರಾಜ ಕೆ.ಪಿ, ಅಬಕಾರಿ ಉಪ ನಿರೀಕ್ಷಕರಾದ ಭರತೇಶ ಶಿರೋಳ, ಮೊಹ್ಮದ್ ಕಿಫಾಯತ್‍ಉಲ್ಲಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಲೋಕೆಶಪ್ಪ, ಪ್ರವೀಣ ಮತ್ತು ಅಬ್ಬುಸಾಲಿಯಾ ಹಾಜರಿದ್ದರು.



