ದಾವಣಗೆರೆ: ಮುಂಗಾರು ಮಳೆ ಪ್ರಾರಂಭವಾಗಿದ್ದು, ಮಳೆ ಕೊರತೆಯಿಂದ ತುಂಗಾಭದ್ರಾ ನದಿ ನೀರು ಹರಿವಿನ ಮಟ್ಟ ಕುಸಿತಗೊಂಡಿದೆ. ಇದರಿಂದ ದಾವಣಗೆರೆ-ಹರಿಹರ ನಗರಕ್ಕೆ ನೀರು ಪೂರೈಸುವ ಮುಖ್ಯ ಮೂಲವಾಗಿದ್ದ ನದಿ ನೀರಿನ ಕುಸಿತದಿಂದ ಜನರಲ್ಲಿ ಆತಂಕ ಉಂಟಾಗಿದೆ. ಇನ್ನೂ ನದಿಯಿಂದ ಪಂಪ್ ಮಾಡುವ ನಗರದ ಟಿ ವಿ ಸ್ಟೇಷನ್ ಕೆರೆಯಲ್ಲಿ ಸಹ ಕೇವಲ ಎರಡು ತಿಂಗಳಿಗಾಗುವಷ್ಟು ಮಾತ್ರ ಸಂಗ್ರಹವಿದೆ. ಹೀಗಾಗಿ ಹರಿಹರ ತುಂಗಭದ್ರಾ ನದಿ ಬಳಿಯ ನೀರು ಪೂರೈಕೆ ಸ್ಥಳಕ್ಕೆ ಮೇಯರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೇಯರ್ ವಿನಾಯಕ ಬಿ ಹೆಚ್, ಪಾಲಿಕೆ ಸದಸ್ಯರು, ಆಯುಕ್ತರು ಹಾಗೂ ಅಧಿಕಾರಿಗಳು ಹರಿಹರದ ರಾಜನಹಳ್ಳಿಯ ತುಂಗಭದ್ರಾ ನದಿಯ ಬಳಿಯ ಪಾಲಿಕೆಯ ನೀರು ಸರಬರಾಜು ಜಾಕ್‌ವೆಲ್‌ಗೆ ಭೇಟಿ ನೀಡಿ ನದಿಯಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಿದರು.ತದನಂತರ ಪಾಲಿಕೆಯ ಟಿ ವಿ ಸ್ಟೇಷನ್ ಕೆರೆಗೆ ಭೇಟಿ ನೀಡಿ ಕೆರೆಯಲ್ಲಿನ ನೀರಿನ ಲಭ್ಯತೆಯನ್ನು ಪರಿಶೀಲಿಸಿದರು. ಸದ್ಯ ಕೆರೆಯಲ್ಲಿ 2 ತಿಂಗಳಿಗಾಗುವಷ್ಟು ನೀರಿನ ಸಂಗ್ರಹಣೆ ಇದ್ದು, ದಾವಣಗೆರೆ ನಗರಕ್ಕೆ ನೀರಿನ ಕೊರತೆ ಉಂಟಾಗದೇ ಇರುವ ರೀತಿಯಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರಾದ ಎ ನಾಗರಾಜ್, ಮಂಜುನಾಥ ಗಡಿಗುಡಾಳ್, ನಾಗರಾಜು ಹಾಗೂ ಮುಖಂಡರಾದ ಹುಲ್ಮನಿ ಗಣೇಶ್, ಜಗದೀಶ್, ಗುರುರಾಜ್, ಗೋಪಿ ನಾಯ್ಕ್ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.



