ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಆಗಲ್ಲ ಎಂಬ ವರದಿ ಇದೆ. ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ಇಲ್ಲ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ ಆಗಲ್ಲ ಎಂಬ ವರದಿ ಇದ್ದು, ತಜ್ಞರ ವರದಿ ಪ್ರಕಾರ ಶೇ. 96 ರಿಂದ ಶೇ. 104 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸ್ವಲ್ಪ ಮಳೆ ಸಮಸ್ಯೆಯಾಗಿರಬಹುದು. ಆದರೆ ಜುಲೈನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
251 ನೋಂದಣಿ ಕಚೇರಿಗಳಲ್ಲಿ ಇಂದಿನಿಂದ ಕಾವೇರಿ-2 ತಂತ್ರಾಂಶ ಜಾರಿಯಾಗಲಿದೆ. ಎಲ್ಲಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಅನ್ ಲೈನ್ ನಲ್ಲಿ ಮಾಡಬಹುದು. ನೋಂದಣಿ ಶುಲ್ಕವನ್ನು ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ಜಮೀನು ಅಕ್ರಮವನ್ನು ತಡೆಯಬಹುದು. ಯಾರದ್ದೋ ಜಮೀನು ಯಾರಿಗೋ ನೋಂದಣಿ ಮಾಡಲು ಆಗಲ್ಲ ಎಂದರು.



