ದಾವಣಗೆರೆ: ಹರಿಹರ ತಾಲೂಕಿನ ಕುರುಬರಹಳ್ಳಿ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿಮಿತ್ತ ಜೂ. 16ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಗಂಗನರಸಿ, ಚಿಕ್ಕಬಿದರಿ, ಸಾರಥಿ, ಕೊಂಡಜ್ಜಿ, ಕೆಂಚನಹಳ್ಳಿ, ಕುರುಬರಹಳ್ಳಿ,ವಟಗನಹಳ್ಳಿ, ಬುಳ್ಳಾಪುರ, ಕರ್ಲಹಳ್ಳಿ, ಆಯಿಲ್ ಮಿಲ್, ಕಲ್ಪತರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
66/11ಕೆವಿ ಸೊಕ್ಕೆ ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅದರ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಮತ್ತು ನೀರಾವರಿ ಪಂಪ್ಸೆಟ್ ಮಾರ್ಗಗಳಲ್ಲಿ ಜೂನ್ 16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



