ದಾವಣಗೆರೆ: ಪತ್ನಿಗೆ ಬಯಕೆ ಬುತ್ತಿ ಕೊಡಲು ಬಂದ ಪತಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನ ಸುಳಿಗೆ ಸಿಕ್ಕು ಮೃತಪಟ್ಟ ಘಟನೆ ಹರಿಹರ ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ.
ಕೊಟ್ಟೂರು ತಾಲ್ಲೂಕು ಉಜ್ಜಿನಿಯ ಸಿದ್ದೇಶ್ (31) ಮೃತ ವ್ಯಕ್ತಿಯಾಗಿದ್ದು, ಕಳೆದ ಆರು ತಿಂಗಳ ಹಿಂದಷ್ಟೇ ದೀಟೂರು ಗ್ರಾಮದ ಚಂದ್ರಿಕಾ ಅವರೊಂದಿಗೆವಿವಾಹವಾಗಿತ್ತು. ಪತ್ನಿ ಚಂದ್ರಿಕಾಳಿಗೆ ಬಯಕೆ ಬುತ್ತಿಯನ್ನು ಕೊಡುವ ಕಾರ್ಯಕ್ರಮಕ್ಕೆ ಸಿದ್ದೇಶ್, ಉಜ್ಜಿನಿಯಿಂದದೀಟೂರು ಗ್ರಾಮಕ್ಕೆ ಬಂದಿದ್ದರು.ಮಧ್ಯಾಹ್ನ 3 ಗಂಟೆ ವೇಳೆಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿಕೊಂಡು ಬರಲು ಹೋಗಿದ್ದ ಸಿದ್ದೇಶ್, ನೀರಿನ ಸುಳಿಗೆ ಸಿಕ್ಕು ಶವವಾಗಿ ಮರಳಿದ್ದಾರೆ.
ಸಂಜೆ ವರೆಗೂ ಅಗ್ನಿ ಶಾಮಕ ದಳದವರು, ಈಜುಗಾರರು ಶವವನ್ನು ಹುಡುಕಿದರಾದರೂ ಮೃತದೇಹ ಸಿಕ್ಕಿರಲಿಲ್ಲ. ಮರು ದಿನ ಬೆಳಿಗ್ಗೆ ಸಿದ್ದೇಶ್ ಮೃತ ದೇಹ ಸಿಕ್ಕಿದೆ. ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.