ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪ್ರದೇಶದಲ್ಲಿ 3 ಪ್ರಕರಣಗಳಿಂದ ವಶಪಡಿಸಿಕೊಳ್ಳಲಾದ 18.00 ಕ್ವಿಂಟಾಲ್ ಅಕ್ಕಿ, ಪಡಿತರ ಧಾನ್ಯಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜೂನ್ 16 ರಂದು ಬೆಳಿಗ್ಗೆ 10.30 ಗಂಟೆಗೆ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎ.ಪಿ.ಎಂ.ಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ.ಗೋದಾಮು, ಎ.ಪಿ.ಎಂ.ಸಿ ಕಚೇರಿ ಹಿಂಭಾಗ ದಾವಣಗೆರೆ ಇಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ ಎಂದು ದಾವಣಗೆರೆ ತಹಶೀಲ್ದಾರ್ ಡಾ.ಎಂ.ಬಿ ಅಶ್ವಥ್ ತಿಳಿಸಿದ್ದಾರೆ.
ದಾಸ್ತಾನಿನ ವಿವರ : ದಿನಾಂಕ:28.01.2023 ರಂದು ಕುರ್ಕಿ ಬುಳ್ಳಾಪುರ ಬಳಿ 10.78 ಕ್ವಿಂಟಾಲ್ ಅಕ್ಕಿ, .ದಿನಾಂಕ:25.02.2023 ರಂದು ದೊಡ್ಡಬಾತಿ ಗ್ರಾಮ ಬಳಿ 2.40 ಕ್ವಿಂಟಾಲ್ ಅಕ್ಕಿ, ದಿನಾಂಕ: 01.03.2023 ರಂದು ವಡ್ಡಿನಹಳ್ಳಿ ಗ್ರಾಮದ ಬಳಿ 4.82 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಕಚೇರಿ ಕೆಲಸದ ಅವಧಿಯಲ್ಲಿ ಗೋದಾಮಿಗೆ ಭೇಟಿ ನೀಡಿ ದಾಸ್ತಾನನ್ನು ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಹಾರ ಶಿರಸ್ತೆದಾರರು ಮೊ.ಸಂ: 9480065633, ಆಹಾರ ನಿರೀಕ್ಷಕರು ಮೊ.ಸಂ: 8722433298, 7411462337 ನ್ನು ಸಂಪರ್ಕಿಸಲು ಕೋರಲಾಗಿದೆ.



