ನವದೆಹಲಿ; ತಿಂಗಳ ಮೊದಲ ದಿನವೇ ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 83.50 ರೂ.ಗೆ ಇಳಿಕೆಯಾಗಿದೆ. ಈ ಮೂಲಕ 19 ಕೆಜಿ ಸಿಲಿಂಡರ್ ಬೆಲೆ 1,773 ರೂ.ಗೆ ಇಳಿಕೆಯಾದಂತಾಗಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂದು (ಜೂನ್ 1) 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿದಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂ. ಇದೆ. 14.2 ಕೆಜಿ ಗ್ಯಾಸ್ ಸಿಲಿಂಡರ್ ದರ ಕಳೆದ ತಿಂಗಳ ಬೆಲೆಯಲ್ಲಿ ಪೂರೈಕೆಯಾಗಲಿವೆ.
ನವದೆಹಲಿಯಲ್ಲಿ ಇಂದು ಗೃಹ ಬಳಕೆ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 1,103.00 ರೂ. ಇದೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,773 ರೂ., ಕೋಲ್ಕತ್ತಾದಲ್ಲಿ 1960.50 ರೂ., ಮುಂಬೈನಲ್ಲಿ 1725 ರೂ., ಚೆನ್ನೈನಲ್ಲಿ 1937 ರೂ.ಇದೆ.