ದಾವಣಗೆರೆ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಭ್ಯವಿರುವ ಹಾಗೂ ರಾಜ್ಯದ ಆಯ್ದ 26 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಲಭ್ಯವಿರುವ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸ್ಥಾನಗಳ ಮೆರಿಟ್ ಕಮ್ ರೋಸ್ಟರ್ ಪ್ರಕಾರರಾಜ್ಯ ಮಟ್ಟದಲ್ಲಿನಾನ್ ಇಂಟರ್ ಆಕ್ಟಿವ್ ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಮೇ 18ರಂದು ಸಂಜೆ 5 ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಸಂಸ್ಥೆಯ ಕಚೇರಿಯ ಪ್ರವೇಶ ವಿಭಾಗದಲ್ಲಿ ಸಲ್ಲಿಸಿ, ಆನ್‌ಲೈನ್ ಮೂಲಕ ದಾಖಲಿಸಿ, ಕೋರ್ಸುಗಳ ಆದ್ಯತಾ ಪಟ್ಟಿ ದಾಖಲಿಸಿ ಸ್ವೀಕೃತಿ ಪಡೆಯಬೇಕು. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು. ಮೇ 18 ರ೦ದು ಸ೦ಜೆ 6 ಗ೦ಟೆಯ ನಂತರ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ಮೇ 19 ರಂದು ಮೆರಿಟ್ ಪಟ್ಟಿಗೆ ಆಕ್ಷೇಪಣೆ ಮತ್ತು ತಿದ್ದುಪಡಿ ನಡೆಸಲಾಗುವುದು. ಮೇ 19 ಸಂಜೆ 5ಗಂಟೆ ನಂತರ ಅ೦ತಿಮ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುವುದು.ಮೇ 20ರ೦ದು ಸಂಜೆ 5 ಗಂಟೆಯ ನಂತರ ಸೀಟು ಹ೦ಚಿಕೆ ಮಾಡಲಾಗುವುದು. ಮೇ 21ರಿಂದ 23 ರವರೆಗೆ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ನಿಗದಿತ ಶುಲ್ಕದೊಂದಿಗೆ ಪ್ರವೇಶ ಪ್ರಕ್ರಿಯೆನಡೆಸಲಾಗುವುದು ಎಂದು ತಿಳಿಸಿದ್ದಾರೆ.



