ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ನೂತನ ಅಧ್ಯಕ್ಷರಾಗಿ ಪಿ.ಡಬ್ಲ್ಯೂ.ಡಿ ಇಲಾಖೆ ಕಚೇರಿಯ ಆದೀಕ್ಷಕ ವೀರೇಶ್ ಎಸ್ . ಒಡೇನಪುರ ಆಯ್ಕೆಯಾಗುದ್ದಾರೆ. ಇವರಿಗೆ ನಿಕಟಪೂರ್ವ ಅಧ್ಯಕ್ಷ ಬಿ. ಪಾಲಾಕ್ಷ ಹೂಗುಚ್ಚ ನೀಡಿ ಸ್ವಾಗತಿಸಿದರು.
ಸಂಘದ ಕಚೇರಿಯಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ವೀರೇಶ್ ಎಸ್ . ಒಡೇನಪುರ, ಈ ಹಿಂದೆ ಅಧ್ಯಕ್ಷರಿಗೆ ನೀಡಿದ ಎಲ್ಲಾ ಸಹಕಾರವನ್ನು ನಮಗೆ ನೀಡುವಂತೆ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯ ಅಧ್ಯಕ್ಷ ಗುರುಮೂರ್ತಿ. ಸಿ. ಜಿಲ್ಲಾ ಖಜಾಂಚಿಬಿ .ಆರ್. ತಿಪ್ಪೇಸ್ವಾಮಿ, ಪ್ರಭಾರಿ ರಾಜ್ಯ ಪರಿಷತ್ ಸದಸ್ಯ ಲೋಕಣ್ಣ ಮಾಗೋಡ್ರು, ಗೌರವ ಅಧ್ಯಕ್ಷ ಡಾಕ್ಟರ್ ಉಮೇಶ್ .ಬಿ, ಜಗಳೂರು ತಾಲೂಕು ನೌಕರ ಸಂಘದ ಅಧ್ಯಕ್ಷ ಬಿ .ಆರ್ .ಚಂದ್ರಪ್ಪ, ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ವಾರ್ತಾ ಇಲಾಖೆಯ ಬಿ .ಎಸ್.ಬಸವರಾಜು, ಜಿಲ್ಲಾ ಖಜನೀಯ ಜುಬೇರ ಹಾಗೂ ಸಂಘದ ಎಲ್ಲಾ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.



