ದಾವಣಗೆರೆ: ಶಾಲೆಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ನೀಡಲು ಲ೦ಚದ ರೂಪದಲ್ಲಿ 38 ಸಾವಿರದ ಲ್ಯಾಪ್ಟಾಪ್‌ಗೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅಗ್ನಿಶಾಮಕ ದಳದಅಧಿಕಾರಿ ಹಾಗೂ ಫೈಯರ್ ಮ್ಯಾನ್ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಜಿಲ್ಲಾ ಅಧಿಕಾರಿಬಸವಪ್ರಭು ಶರ್ಮ ಮತ್ತು ಫೈರ್‌ಮ್ಯಾನ್ ಎಸ್.ಕೆ.ರಾಜೇಶ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು. ಹರಿಹರದ ಶ್ರೀ ದುರುಗೋಜಿ ಗೋಪಾಲರಾವ್ ಶಿಕ್ಷಣ ಮತ್ತು ಚಾರಿಟಬಲ್ ಬಸವಪ್ರಭು ಶರ್ಮ ಟ್ರಸ್ಟ್ ನ ವಿದ್ಯಾದಾಯಿನಿ ಶಾಲೆಗೆ ಇಲಾಖೆಯಿಂದ ಎನ್‌ಒಸಿ ನೀಡಲು ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ಫೈರ್ ಮ್ಯಾನ್ ರಾಜೇಶ ಡೆಲ್ ಕಂಪನಿಯ ಲ್ಯಾಪ್‌ಟಾಪ್ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಟ್ರಸ್ಟ್‌ನ ಅಧ್ಯಕ್ಷ ಡಿ.ಜಿ.ರಘುನಾಥ್ ತಮ್ಮ ಶಾಲೆಗೆ ಎನ್‌ಒಸಿ ನೀಡಲು ಲ್ಯಾಪ್ ಟಾಪ್‌ಗೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತ ಇಲಾಖೆಯಲ್ಲಿ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ನಿರೀಕ್ಷಕರಾದ ಎನ್.ಎಚ್.ಆ೦ಜನೇಯ, ಎಚ್.ಎಸ್.ರಾಷ್ಟ್ರಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಅಗಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮ, ಫೈರ್‌ಮ್ಯಾನ್ ರಾಜೇಶ್ ಡೆಲ್ ಕಂಪನಿಯ 38,500 ರು. ಮೌಲ್ಯದ ಲ್ಯಾಪ್‌ಟಾಪ್‌ಸ್ವೀಕರಿಸುತ್ತಿದ್ದ ವೇಳೆ ಟ್ರ್ಯಾಪ್ ಮಾಡಿ, ಲ್ಯಾಪ್‌ಟಾಪ್‌ಸಮೇತ ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಲೋಕಾಯುಕ್ತ ಸಿಬ್ಬ೦ದಿಯಾದ ಎನ್.ಆರ್.ಚಂದ್ರಶೇಖರ, ವಿ.ಎಚ್.ಆ೦ಜನೇಯ, ಎಸ್.ಎಂ.ವೀರೇಶಯ್ಯ, ಮುಜೀಬ್ ಖಾನ್, ಎಸ್.ಎನ್.ಲಿಂಗೇಶ, ಸಿ.ಎಸ್.ಬಸವರಾಜ, ಜೆ.ಕೃಷ್ಣ ನಾಯ್ಕ ಇತರರು ಕಾರ್ಯಾಚರಣೆ ನಡೆಸಿ, ಟ್ರ್ಯಾಪ್ ಮಾಡಿದ್ದಾರೆ. ತನಿಖೆ ಮುಂದುವರಿದಿದೆ ಎ೦ದು ಲೋಕಾಯುಕ್ತ ಇಲಾಖೆ ತಿಳಿಸಿದೆ.



