ಡಿವಿಜಿ ಸುದ್ದಿ, ಚನ್ನಗಿರಿ: ತಾಲೂಕಿನ ಹಿರೇಕೋಗಲೂರು ಗ್ರಾಮದ ಕೆರೆ ಅಂಗಳದಲ್ಲಿರುವ ಕೆರೆ ಚೌಡೇಶ್ವರಿ ದೇವಿಯ ನಾಲ್ಕನೇ ವರ್ಷದ ಕಾರ್ತಿಕೋತ್ಸವ ನಡೆಯಿತು. ಕೋಗಲೂರು ಕೆರೆ ಏರಿಯ ಮೇಲೆ ಕನ್ಯಪರಮೇಶ್ವರಿ ದೇವಸ್ಥಾನವಿದ್ದು, ಚೌಡೇಶ್ವರಿ ದೇವಿಯೂ ನೆಲೆಸಿದ್ದಾಳೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಹೀಗಾಗಿ ಕೆರೆ ಅಂಗಳದಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿ ಪ್ರತಿ ವರ್ಷ ಕಾರ್ತಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಕೆರೆ ಅಂಗಳದಲ್ಲಿದನ ಮೇಯಿಸುವುದಕ್ಕೆ ಹೋಗುತಿದ್ದ ಮಡಿವಾಳರ ಹನುಮಂತಪ್ಪ , ಬಿದರಗಡ್ಡೆ ಚಂದ್ರಪ್ಪ , ನುಗ್ಗೆಹಳ್ಳಿ ಹನುಮಂತಪ್ಪ ಸೇರಿದಂತೆ ಅನೇಕರು ದಾರಿಯಲ್ಲಿ ಹಾದು ಹೋಗುವ ಬಳಿ ಐದು, ಹತ್ತು ರೂಪಾಯಿ ಚಂದ ವಸೂಲಿಮಾಡಿ ಕೆರೆ ಅಂಗಳದಲ್ಲಿ 2015 ರಲ್ಲಿ ದೇವಸ್ಥಾನ ಸ್ಥಾಪಿಸಿದರು.
ಅಲ್ಲಿಂದ ಇಲ್ಲಿಯ ವರೆಗೆ ಪ್ರತಿವರ್ಷ ಕಾರ್ತಿಕೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯ ಶಾಸಕರು ದೇವಸ್ಥಾನದ ಅಭಿವೃದ್ದಿಗೆ ಸಹಕರಿಸಬೇಕೆಂದು ಕೆರೆ ಚೌಡೇಶ್ವರಿ ದೇವಸ್ಥಾನದ ಕಮಿಟಿ ಸದಸ್ಯರು ವಿನಂತಿಸುತ್ತಿದ್ದಾರೆ. ಸಂತೇಬೆನ್ನೂರು ಮಾರ್ಗವಾಗಿ ಹೋಗುವವರು ಪ್ರಸಾದ ಸ್ವೀಕರಿಸಿದರು.