ದಾವಣಗೆರೆ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 224 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಗೆ ಒಂದೇ ಹಂತದಲ್ಲಿ ಬಿಜೆಪಿ 189 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಲ್ಲಿ 3 ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಇನ್ನುಳಿದ 4 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಳ್ಳಲಾಗಿದೆ. ಹರಿಹರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಪಿ.ಹರೀಶ್, ಹೊನ್ನಾಳಿ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಜಗಳೂರಿನಿಂದ ಎಸ್. ವಿ ರಾಮಚಂದ್ರಗೆ ಟಿಕೆಟ್ ನೀಡಲಾಗಿದೆ.
ದಾವಣಗೆರೆ ಉತ್ತರ, ದಕ್ಷಿಣ ತೀವ್ರ ಕುತೂಹಲ; ಹೈವೋಲ್ವೇಜ್ ಕ್ಷೇತ್ರವೆಂದೇ ಬಿಂಬಿತವಾದ ಉತ್ತರ ಕ್ಷೇತ್ರ ಹಾಲಿ ಶಾಸಕ ಎಸ್.ಎ.ರವೀಂದ್ರನಾಥ್ ಆರೋಗ್ಯ, ವಯಸ್ಸಿನ ಕಾರಣಕ್ಕೆ ಸ್ಪರ್ಧಿಸುವುದಿಲ್ಲವೆಂಬ ಘೋಷಣೆ ಮಾಡಿದ್ದರು. ಎಸ್ಸೆಸ್ ಮಲ್ಲಿಕಾರ್ಜುನ ಎದುರು ಗೆಲ್ಲುವ ಅಭ್ಯರ್ಥಿಗೆ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಇನ್ನೂ ದಕ್ಷಿಣ ಕ್ಷೇತ್ರದಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಸೋಲಿಸಲು ಲೆಕ್ಕಾಚಾರ ಹಾಕಲಾಗುತ್ತಿದೆ. ಈ ತಂತ್ರಗಾರಿಕೆಯಲ್ಲಿ ಸದ್ಯ ಬಿಜೆಪಿನಾಯಕರು ಅಭ್ಯರ್ಥಿ ಘೋಷಿಸಿಲ್ಲ.
ಮಲೆನಾಡ ಸೆರಗು ಚನ್ನಗಿರಿ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದು, ಮಾಡಾಳು ಪುತ್ರ ಮಲ್ಲಿಕಾರ್ಜುನ, ತುಮ್ಮೋಸ್ ಮಾಜಿ ಅಧ್ಯಕ್ಷ ಎಚ್.ಶಿವಕುಮಾರ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಸಿಗದಿದ್ದರೆ ಮಾಡಾಳ್ ಮಲ್ಲಿಕಾರ್ಜುನ ಬಂಡಾಯ ಸಾರುವ ಸಾಧ್ಯತೆ ಇದೆಯೆಂಬ ಮಾತುಗಳ ಮಧ್ಯೆ ತುಮೋಸ್ ಮಾಜಿ ಅಧ್ಯಕ್ಷ ಎಚ್. ಶಿವಕುಮಾರ ವರಿಷ್ಠರ ಸಂಪರ್ಕದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ವಂಚಿತರ ಜೊತೆಗೂ ಬಿಜೆಪಿನಾಯಕರು ಚರ್ಚೆಯಲ್ಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ಚನ್ನಗಿರಿಗೂ ಅಭ್ಯರ್ಥಿ ಘೋಷಣೆಯಾಗಿಲ್ಲ.
ಮಾಯಕೊಂಡವೂ ಕುತೂಹಲ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಘೋಷಿಸಿದ ಲಾಭವನ್ನು ಮಾಯಕೊಂಡದಲ್ಲಿ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಪಾಳೆಯವಿದೆ. ಆದರೆ, ಹಾಲಿ ಶಾಸಕ ಪ್ರೊ.ಎನ್.ಲಿಂಗಣ್ಣ ಒಮ್ಮೆ ಸ್ಪರ್ಧಿಸುವ ಮಾತುಗಳನ್ನಾಡಿದರೆ, ಮತ್ತೊಮ್ಮೆ ಸ್ಪರ್ಧೆ ಮಾಡುವುದಿಲ್ಲವೆನ್ನುತ್ತಿದ್ದಾರೆ. ಸದ್ಯಕ್ಕೆ ಮಾಯಕೊಂಡದಲ್ಲಿ ಮಾದಿಗ, ಭೋವಿ, ಲಂಬಾಣಿ ಸಮುದಾಯದ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರ ಘೋಷಣೆಯಾಟಗಿ ದ್ದುಉಳಿದ ನಾಲ್ಕು ಕ್ಷೇತ್ರಕ್ಕೆ ಯಾರೆ೦ಬುದೇ ಸದ್ಯ ಕುತೂಹಲ ಹುಟ್ಟು ಹಾಕಿದೆ.
BJP releases a list of 189 candidates for the upcoming #KarnatakaElections2023 pic.twitter.com/Pt0AZTaIBE
— ANI (@ANI) April 11, 2023
Karnataka Home Minister Araga Jnanendra to contest from Tirthahalli constituency pic.twitter.com/dtwafeBNka
— ANI (@ANI) April 11, 2023



