ಹರಿಹರ: ಬೈಕ್‌ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.28 ಲಕ್ಷ ನಗದನ್ನು ಚಕ್ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಕುರುಬರಹಳ್ಳಿ ಚೆಕ್‌ಪೋಸ್ಟ್ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಹರಿಹರದಿ೦ದ ಹರಪನಹಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್ ತಪಾಸಣೆ ನಡೆಸಿದಾಗ ಸವಾರ ಹರಪನಹಳ್ಳಿಯ ಹೊಸ ಭರ೦ಪುರ ಬಡಾವಣೆಯ ಎ.ಬಿ. ರಾಚನಗೌಡ
ಎಂಬುವರು ಬಳಿ ಹಣ ಪತ್ತೆ ಯಾಗಿದೆ. ದಾಖಲೆ ಒದಗಿಸದ್ದರಿಂದ ಕಣ್ಣಾವಲು ತಂಡದ ನೂರಲ್ಲಾ ಹುಸೇನ್ ಹಣ ವಶಪಡಿಸಿ ಸ್ವೀಕೃತಿನೀಡಿದ್ದಾರೆ. ಪ್ರೈಯಿಂಗ್ ಸ್ಟಾಡ್ ತಂಡದ ನಾಗರಾಜ ಡಿ.ಇ. ಸ್ಥಳಕ್ಕೆ ಭೇಟಿ ನೀಡಿದ್ದರು.



