ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಆದಾಪುರ ಗ್ರಾಮದ ಮನೆಯೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು 61 ಸಾವಿರವಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಹರಿಹರ ತಾಲ್ಲೂಕಿನ ಆದಾಪುರದ ಹನುಮಕ್ಕ ಅವರ ಮನೆಯ ಮೇಲೆ ದಾಳಿ ನಡೆಸಸಲಾಗಿದೆ. ದಾಳಿ ವೇಳೆ 57,600 ಮೌಲ್ಯದ 145.440 ಲೀಟರ್ ಮದ್ಯ, ಹಾಗೂ 3400 ಮೌಲ್ಯದ 22.100 ಬಿಯರ್ ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ಡಿವೈಎಸ್ಪಿ ರವಿ ಎಂ. ಮರಿಗೌಡ್ರ ಅವರ ಮಾರ್ಗದರ್ಶನದಲ್ಲಿ ನಿರೀಕ್ಷಕಿ ಸವಿತಾ ಎಚ್., ಉಪ ನಿರೀಕ್ಷಕ ರಂಗಸ್ವಾಮಿ ಸಿ.ಆರ್. ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.



