ದಾವಣಗೆರೆ: ವಿಧಾನಸಭಾ ಚುನಾವಣೆ ಶಾಂತಿಯುತ ಹಾಗೂ ಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯ ದೇವಸ್ಥಾನ, ಮಠ, ಮಂದಿರ, ಜೈನ ಬಸದಿ, ಮಸೀದಿ, ದರ್ಗಾ ಹಾಗೂ ಇವುಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯ ಭವನ, ಯಾತ್ರಿನಿವಾಸ ಪ್ರದೇಶ, ಕಲ್ಯಾಣ ಮ೦ಟಪ ಭಾಗದ ದೇವಸ್ಥಾನದ ಆವರಣದ ಖಾಲಿ ಜಾಗದ ಪ್ರದೇಶದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನ೦ದ ಕಾಪಶಿ ತಿಳಿಸಿದ್ದಾರೆ.
ದೇವಸ್ಥಾನ, ಚರ್ಚ್, ಮಸೀದಿ ಇವುಗಳ ಧ್ವನಿವರ್ಧಕಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಈ ಮೇಲಿನ ಯಾವುದೇ ಅಂಶಗಳ ಉಲ್ಲಂಘನೆಯಾದಲ್ಲಿ ಧಾರ್ಮಿಕ ಸಂಸ್ಥೆಗಳ (ತಡೆಗಟ್ಟುವಿಕೆ ಅಥವಾ ದುರುಪಯೋಗ) ಕಾಯ್ದೆ 1988ರ ಪ್ರಕಾರ ನಿಯಮಾನುಸಾರ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾ
ಗುವುದೆ೦ದು ತಿಳಿಸಿದ್ದಾರೆ.



