ದಾವಣಗೆರೆ; ದಾವಣಗೆರೆ ಮಹಾನಗರ ಪಾಲಿಕೆಯ 2023-24ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 1ರಿಂದ 30ರ ಒಳಗಾಗಿ ಪಾವತಿಸಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ಇರುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ಪಾವತಿಸಿದಲ್ಲಿ ಯಾವುದೇ ದಂಡ ವಿಧಿಸಲಾಗುವುದಿಲ್ಲ, ಜುಲೈ ನಂತರ ಪಾವತಿಸುವವರಿಗೆ ಶೇ.2 ರಷ್ಟು ದಂಡವನ್ನು ವಿಧಿಸಲಾಗುವುದು.
ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಟ್ರೇಡ್ ಲೈಸೆನ್ಸ್, ಜಾಹೀರಾತು ಶುಲ್ಕವನ್ನು ಸಕಾಲದಲ್ಲಿ ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸಬೇಕು. ತೆರಿಗೆ ಇನ್ನಿತರೆ ಶುಲ್ಕಗಳನ್ನು ನಗದು ಮತ್ತು ಬಿ.ಬಿ.ಪಿ.ಎಸ್
(ಆನ್ ಲೈನ್ ಯು.ಪಿ.ಐ) ಮೂಲಕ ಬ್ಯಾಂಕಿಗೆ ಪಾವತಿಸಬಹುದಾಗಿದೆ. ಸಾರ್ವಜನಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು
ಪಾಲಿಕೆ ಆಯುಕ್ತೆ ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



