ದಾವಣಗೆರೆ: ನಗರದ ಶಾಮನೂರು ರಸ್ತೆಯ ಎಸ್.ಎಸ್ ಲೇಔಟ್ ಎ ಬ್ಲಾಕ್ ನ ಗುಡ್ ಹೋಮ್ಸ್ ಫರ್ನಿಚರ್ ಶಾಪ್ ಪಕ್ಕದ ಖಾಲಿ ನಿವೇಶನದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ(36) ಪತ್ತೆ ಆಗಿದ್ದು, ಮೃತನ ಹೆಂಡತಿ ಶ್ವೇತಾ ಕೋಂ ಮಹಾಂತೇಶ (28) ವಾಸ- ಬುದ್ಧ ಬಸವ ನಗರ ಹಗೇದಿಬ್ಬಾ ಸರ್ಕಲ್ ಹತ್ತಿರ ದಾವಣಗೆರೆ ಮತ್ತು ಅವಳ ಪ್ರಿಯಕರ ಚಂದ್ರಶೇಖರ್ @ ಚಂದ್ರ (29) ವರ್ಷ, ವಾಸ- ಬುದ್ಧ ಬಸವ ನಗರ ಹಗೆದಿಬ್ಬ ಸರ್ಕಲ್ ಹತ್ತಿರ ದಾವಣಗೆರೆ ಇವರನ್ನು ಬಂಧಿಸಲಾಗಿದೆ. ಆರೋಪಿತನಿಂದ ಕೊಲೆ ಮಾಡಲು ಬಳಿಸಿದ ಸುಮಾರು ಒಂದು ಲಕ್ಷ ಬೆಲೆ ಬಾಳುವ 2 ದ್ವಿ-ಚಕ್ರ ವಾಹನ, 2 ಮೊಬೈಲ್ ಪೋನ್, ಒಂದು ಚಾಕು, ಬೀಯರ್ ಬಾಟಲ್‌ಗಳು, ಮಾತ್ರೆಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ.
ದಿನಾಂಕ: 23-03-2023 ರಂದು ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನ ಎಸ್.ಎಸ್ ಲೇಔಟ್ ಎ ಬ್ಲಾಕ್ ರಿಂಗ್ ರಸ್ತೆ ಗುಡ್ ಹೋಮ್ಸ್ ಫರ್ನಿಚರ್ ಅಂಗಡಿ ಪಕ್ಕದ ಖಾಲಿ ನಿವೇಶನದಲ್ಲಿ ಸುಮಾರು 25 ವರ್ಷದ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಹೋಗಿರುತ್ತಾರೆಂದು ಸಾರ್ವಜನಿಕರಿಂದ ಹೊಯ್ಸಳಕ್ಕೆ ದೂರು ಬಂಧಿದ್ದು. ಹೊಯ್ಸಳ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ವ್ಯಕ್ತಿ ಇನ್ನೂ ಜೀವಂತ ಇದ್ದರಿಂದ ಅಂಬ್ಯುಲೆನ್ಸ್ ನಲ್ಲಿ ಸಿ.ಜಿ ಆಸ್ಪತ್ರೆಗೆ ಸಾಗಿಸಿದ್ದು. ಸಿ.ಜಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಧೃಢೀಕರಿಸಿದ್ದು. ಈ ಸಂಬAದ ಹೊಯ್ಸಳ ಸಿಬ್ಬಂದಿ ನೀಡಿದ ದೂರನ್ನು ಸ್ವೀಕರಿಸಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿ.ಸಿ.ಆರ್.ಬಿ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್ ಎಸ್ ಇವರ ಮಾರ್ಗದರ್ಶನದಲ್ಲಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ನೇತೃತ್ವದಲ್ಲಿ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು. ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತನ ಹೆಸರು ವಿಳಾಸ ಪತ್ತೆ ಮಾಡಲಾಗಿದೆ.
ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ಆರ್.ಬಿ ಬಸರಗಿ ರವರು ಶ್ಲಾಘಿಸಿದ್ದಾರೆ.



