ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಾನುಸಾರ ಅನುಮೋದಿತ ಕಟ್ಟಡ ಪರವಾನಿಗೆ ನಕ್ಷೆಯಂತೆ ಕಟ್ಟಡವನ್ನು ನಿರ್ಮಿಸಿಕೊಂಡವರು ಹಾಗೂ ಸಕ್ಷಮ ಪ್ರಾಧಿಕಾರದಿಂದ occupancy certificate ಪಡೆದುಕೊಂಡವರು ಮಾತ್ರ ಭದ್ರತಾ ಠೇವಣಿ ಮೊತ್ತವನ್ನು ಹಿಂಪಡೆಯಲು ಮಾ. 16 ರಿಂದ30 ದಿನದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
2015-16 ಜುಲೈ ನಿಂದ ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ಭದ್ರತಾ ಠೇವಣಿ (Security deposit)
ಅನ್ನು ಪಾವತಿಸಿಕೊಳ್ಳುತ್ತಿದ್ದು, ಸದರಿ ಪಾವತಿಯಾಗಿರುವ
ಶುಲ್ಕವನ್ನು ಇತರೆ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುವ ಸಂಬಂಧ ಫೆ. 9 ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ನಿಯಮಾನುಸಾರ ಮನೆ ಕಟ್ಟಿದವರು ಮಹಾನಗರ ಪಾಲಿಕೆಯಲ್ಲಿ ಇಟ್ಟಿದ್ದ ಭದ್ರತಾ ಠೇವಣಿ ಹಿಂಪಡೆಯಲು ಅವಕಾಶ ನೀಡಲಾಗಿದೆ.



