Connect with us

Dvgsuddi Kannada | online news portal | Kannada news online

‘ಹೊಸ ವರ್ಷ 2020ರ ನಿಮ್ಮ ರಾಶಿ ಭವಿಷ್ಯ’ ಹೇಗಿದೆ ಅನ್ನೋದನ್ನ ನೋಡಿ…

ಪ್ರಮುಖ ಸುದ್ದಿ

‘ಹೊಸ ವರ್ಷ 2020ರ ನಿಮ್ಮ ರಾಶಿ ಭವಿಷ್ಯ’ ಹೇಗಿದೆ ಅನ್ನೋದನ್ನ ನೋಡಿ…

ಶ್ರೀ  ಸಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ

ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

“ಮೇಷ ರಾಶಿ”:
ಅಶ್ವಿನಿ ನಕ್ಷತ್ರ: ಚು, ಚೆ, ಚೋ, ಲ
ಭರಣಿ ನಕ್ಷತ್ರ: ಲಿ ,ಲು ,ಲೆ, ಲೋ
ಕೃತಿಕಾ ನಕ್ಷತ್ರ. 1ನೇ ಪಾದ ಅ.
ಹಣಕಾಸಿನಲ್ಲಿ ಪ್ರಗತಿ ಕಾಣುತ್ತದೆ. ಮಕ್ಕಳಿಗೆ ವಿವಾಹಯೋಗ. ನಿಮ್ಮ ಸಮಾಜದಲ್ಲಿ ಸ್ಥಾನಮಾನ ಲಭಿಸುತ್ತದೆ. ಸರಕಾರಿ ನೌಕರರ ಸ್ಥಾನಪಲ್ಲಟ ಹಾಗೂ ಬಡ್ತಿ ಸಂಭವ. ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯದಲ್ಲಿ ಮಧ್ಯಮ ಶ್ವಾಸಕೋಶ ಸಂಬಂಧಿ ರೋಗ, ಎದೆನೋವು, ಉದರ ದೋಷ ಎದುರಿಸುವಿರಿ. ಅತಿಯಾದ ವಾಹನ ಪ್ರಯಾಣದಿಂದ ಶರೀರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಳೆಯ ಸಾಲ ತೀರಿಸುವ ಕಾಲ ಬಂದಿರುತ್ತದೆ. ದಾಂಪತ್ಯದಲ್ಲಿ ಸುಖ ಮಾನಸಿಕ ನೆಮ್ಮದಿ ಇರುತ್ತದೆ. ಶತ್ರುಗಳು ತಮ್ಮಿಂದ ದೂರ ಸರಿಯುತ್ತಾರೆ. ಸರಕಾರಿ ಕಚೇರಿಯಲ್ಲಿ ಬಾಕಿ ಇರುವ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ಯಶಸ್ವಿ ಕಾಣುವಿರಿ. ವಾಹನ ಖರೀದಿ. ಕೆಲವರಿಗೆ ಸಂತಾನಭಾಗ್ಯ. ದೇವದರ್ಶನ ಕುಟುಂಬದೊಂದಿಗೆ ಪ್ರೇಕ್ಷಣೀಯ ಸ್ಥಳಗಳ ಭೇಟಿ. ಹೋಟೆಲ್ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತದೆ. ಒಣಜಂಬ ಎಂದು ತೋರಿಸಬೇಡಿ. ಉದ್ಯೋಗ ಹುಡುಕಾಟ ಮಾಡುವವರಿಗೆ, ಉದ್ಯೋಗ ಸಿಗುವ ಭಾಗ್ಯ ಲಭಿಸುತ್ತದೆ. ಪ್ರೇಮಿಗಳಿಗೆ ವಿವಾಹ ಅವಕಾಶ ದೊರೆಯಲಿದೆ. ಅರ್ಧಕ್ಕೆ ನಿಂತಿರುವ ಗ್ರಹ ಕಟ್ಟಡ ಇಂದು ಪೂರ್ಣವಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಲಾಭವಾಗಲಿದೆ. ಸ್ತ್ರೀಶಕ್ತಿ ಇರುವಂತ ಹೆಣ್ಣುಮಕ್ಕಳಿಗೆ ಒಳ್ಳೆಯ ಪ್ರಗತಿ ಕಾಣುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

“ವೃಷಭ ರಾಶಿ”:
ಕೃತಿಕಾ ನಕ್ಷತ್ರ: ಚರಣ್ ಅಕ್ಷರಗಳು ಇ, ಉ, ಎ
ರೋಹಿಣಿ ನಕ್ಷತ್ರ: ಒ, ವ, ವಿ, ವು
ಮೃಗಶಿರ ನಕ್ಷತ್ರ: ವೆ, ವೊ
ವರ್ಷಾರಂಭವು ಮಿಶ್ರ ಫಲಗಳಿಂದ ಪ್ರಾರಂಭವಾಗುತ್ತದೆ. ಆರೋಗ್ಯದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಅನಾವಶ್ಯಕ ಕಲಹ ,ತಂದೆಯ ಜೊತೆ ವಾದ. ಗುರುಹಿರಿಯರ ಆಸ್ತಿ ವಿಚಾರದಲ್ಲಿ ಕಿರಿಕಿರಿ ಅನುಭವಿಸುವಿರಿ. ಸಹೋದರ ಜೊತೆ ಮತ್ತು ಅಕ್ಕ ತಂಗಿಯರ ಜೊತೆ ವಿರೋಧ ಸೃಷ್ಟಿಯಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಕಿರಿಕಿರಿ. ಕುಟುಂಬದಲ್ಲಿ ಅಶಾಂತಿ ಕಂಡುಬರುತ್ತದೆ. ಕುಟುಂಬ ಸದಸ್ಯರೊಡನೆ ಜಗಳವಾಗಿ ಕೋರ್ಟ್ ವರೆಗೂ ಹೋಗುವುದು. ಹಿರಿಯರೊಂದಿಗೆ ಮನಸ್ತಾಪ ಮುಂದುವರೆಯುತ್ತದೆ. ಭೂಮಿ ವಿಚಾರ, ಕಟ್ಟಡ ವಿಚಾರ, ಲೋಹ ಇತ್ಯಾದಿ ವ್ಯಾಪಾರಗಳಿಗೆ ಹಾನಿ ಸಂಭವಿಸುತ್ತದೆ. ಉದ್ಯೋಗದಲ್ಲಿ ನಿರಾಸಕ್ತಿ. ಪ್ರೇಮಿಗಳಲ್ಲಿ ವಿರಸ ಮುಂದುವರೆಯುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ. ದೂರದ ಪ್ರದೇಶ ಸ್ಥಳಾಂತರದಿಂದ ತೊಂದರೆ. ಸಣ್ಣಪುಟ್ಟ ಗಾಯಗಳಾಗಿ ಬಳಲಿಕೆಯಿಂದ ಕಿರಿಕಿರಿ. ಪ್ರಯಾಣದಲ್ಲಿ ಅನಾನುಕೂಲ. ಕಚೇರಿಯಲ್ಲಿ ಕಾರ್ಯ ವಿಳಂಬ. ಮನೆಯಲ್ಲಿ ಭಿನ್ನಾಭಿಪ್ರಾಯ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಭೂಮಿಗೆ ಸಂಬಂಧಪಟ್ಟಹಾಗೆ ಕದನ. ಪಿತೃ ವರ್ಗಕ್ಕೆ ಪ್ರಾಣಹಾನಿ. ನೂತನ ವಸ್ತು ಖರೀದಿಗಾಗಿ ಧನವ್ಯಯ. ಅರ್ಧವಾರ್ಷಿಕ ಆದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು .ಹಳೆಯ ಸಾಲ ಸ್ವಲ್ಪ ಪ್ರಮಾಣದ ಚೇತರಿಕೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ. ಅಧಿಕಾರಿಗಳನ್ನು ಹಲವು ರೀತಿಯಿಂದ ಹೋಲಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಂಬದ ಮನುಷ್ಯರಿಂದ ಮೋಸ ಹೋಗುವ ಸಂಭವ.
ಹಣಕಾಸು ಸ್ಥಗಿತ. ಕಾನೂನು ವಾದಗಳಲ್ಲಿ ಎಚ್ಚರ .ಪಿತ್ರಾರ್ಜಿತ ಆಸ್ತಿ ಲಭ್ಯ. ಪಿತೃ ವರ್ಗಕ್ಕೆ ಆರೋಗ್ಯದಲ್ಲಿ ಕಿರಿಕಿರಿ. ವ್ಯಾಪಾರಸ್ಥರಿಗೆ ಮೋಸ ಸಂಭವ .ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ. ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕ ಫಲ. ನಿರುದ್ಯೋಗಿಗಳಿಗೆ ಪರೀಕ್ಷೆಗಳಲ್ಲಿ ಅನುಕೂಲ ಸಂಭವ . ನಿಮ್ಮ ಕುಟುಂಬದ ಜೀವನ ಸಾಮರಸ್ಯದಿಂದ ಕಂಡುಬರುತ್ತದೆ. ನಿರಂತರ ಆದಾಯಕ್ಕಾಗಿ ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿ. ಪ್ರಭಾವಿ ವ್ಯಕ್ತಿಗಳಿಂದ ಪ್ರಗತಿ ಹೊಂದುವಿರಿ. ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ. ಖರ್ಚುವೆಚ್ಚಗಳಲ್ಲಿ ಹೆಚ್ಚಳ. ಸ್ನೇಹಿತರೊಂದಿಗೆ ಸಾಮರಸ್ಯ. ಹೊಸ ವ್ಯಾಪಾರ ಪ್ರಾರಂಭ. ಮೂರನೇ ವ್ಯಕ್ತಿಯಿಂದ ಕುಟುಂಬದಲ್ಲಿ ಕಲಹ. ಮಾಸಾಂತ್ಯ ಮಿಶ್ರ ಪಲದಾಯಕ ವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

“ಮಿಥುನ ರಾಶಿ“:
ಮೃಗಶಿರಾ ನಕ್ಷತ್ರ : ಕ, ಕಿ
ಆರಿದ್ರಾ ನಕ್ಷತ್ರ: ಕು,ಘ, ಭ
ವರ್ಷದ ಪ್ರಾರಂಭದಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಕೀರ್ತಿ. ತಂದೆ ಮತ್ತು ಸಹೋದರರಿಂದ ಧನಲಾಭ .ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ
ಮನೋಕಾಮನೆ ಈಡೇರಿಕೆ. ಸಂತಾನಭಾಗ್ಯ .ವಿದ್ಯೆಯಲ್ಲಿ ಯಶಸ್ಸು. ಸಣ್ಣಪುಟ್ಟ ಗಾಯ ಸಂಭವ .ವ್ಯಾಪಾರಿಗಳಿಗೆ ಲಾಭ. ದಿನಗಳು ಪ್ರೇಮಿಗಳಿಗೆ ಉತ್ತಮ
ಸಮಸ್ಯೆ ಎದುರಾದಾಗ ಚಾಣಾಕ್ಷತನದಿಂದ ಪರಿಹಾರ ಕಂಡುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಆಸಕ್ತಿ .ಪ್ರೇಮಿಗಳಿಗೆ ಉತ್ಸಾಹ. ಉದ್ಯೋಗದಲ್ಲಿ ಒತ್ತಡದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಮಿಶ್ರಫಲ ಬರುತ್ತದೆ. ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತೋಷದ ಕ್ಷಣಗಳು ಅನುಭವಿಸುವಿರಿ. ಯಂತ್ರೋಪಕರಣ ಖರೀದಿ ಸಂಭವ. ಮಾತೃ ವರ್ಗಕ್ಕೆ ಅನಾರೋಗ್ಯ ಭೂಮಿ ಕಟ್ಟಡ ವ್ಯಾಪಾರಿಗಳಿಗೆ ಮಂದಗತಿ ಪ್ರಗತಿ .ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು. ನಿಮಗೆ ಮೂಲವ್ಯಾಧಿ ಸಮಸ್ಯೆ ಕಾಣಬಹುದು. ರೈತ ವರ್ಗದವರಿಗೆ ಉತ್ತಮ ಫಲ ನಿರೀಕ್ಷಣೆ ಮಾಡುವಿರಿ. ಸ್ಟೇಷನರಿ ಮತ್ತು ಪ್ರಿಂಟಿಂಗ್ ಉದ್ಯೋಗಗಳಿಗೆ ಶುಭ. ವಿದೇಶಕ್ಕೆ ಹೋಗುವ ಅವಕಾಶಗಳು ಬರುವವು. ಸಹೋದರ ಮತ್ತು ಪಿತೃ ವರ್ಗದಿಂದ ಸ್ವಲ್ಪ ಧನಸಹಾಯ ದೊರೆಯುತ್ತದೆ. ಆದರೆ ಆರೋಗ್ಯದ ನಿಮಿತ್ತ ಹಣ ವ್ಯಯವಾಗುತ್ತದೆ. ಉದ್ಯೋಗಾವಕಾಶ ಕಡಿಮೆ. ಬಟ್ಟೆ ಅಂಗಡಿ ವ್ಯಾಪಾರದಲ್ಲಿ ಪ್ರಗತಿ ಇಲ್ಲ .ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯ, ಮಾನಸಿಕ ಚಿಂತೆ ಅಧಿಕವಾಗಿರುತ್ತದೆ. ಇದೆಲ್ಲಾ ವರ್ಷದ ಕೊನೆಯಲ್ಲಿ ಅನುಭವಿಸುವಿರಿ. ತಾಯಿಯ ಆರೋಗ್ಯದಲ್ಲಿ ತೊಂದರೆ. ಹಣಕಾಸಿನ ಮುಗ್ಗಟ್ಟಿನಿಂದ ವ್ಯಾಪಾರದಲ್ಲಿ ಏರುಪೇರು. ನಿಮ್ಮ ಶ್ರದ್ಧೆಯಿಂದ ಅಲ್ಪ ಲಾಭ. ನಿಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸಬೇಡಿ .ನೀವೇ ಮಾಡುವುದು ಒಳಿತು. ಬಂಧುಗಳ ಬಗ್ಗೆ ಕೆಟ್ಟ ಸುದ್ದಿಯೊಂದನ್ನು ಕೇಳುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
ಜ್ಯೋತಿಷ್ಯಶಾಸ್ತ್ರ ಪರಿಣಿತರು, ವಾಸ್ತು ಶಾಸ್ತ್ರ ಸಲಹೆಗಾರರು ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mon.9353 488403

“ಕರ್ಕಾಟಕ ರಾಶಿ”
ವರ್ಷಾರಂಭವು ಮಿಶ್ರ ಫಲದಾಯಕವಾಗಿರುತ್ತದೆ. ಉದ್ಯೋಗಿಗಳಿಗೆ ಸ್ಥಾನ ಲಭ್ಯ. ಕೆಲವರಿಗೆ ಬಡ್ತಿಯೋಗ. ಹೆಚ್ಚಿನ ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ . ಪತ್ನಿಯೊಂದಿಗೆ ವಿರಸ. ಪಿತೃವರ್ಗ ದಿಂದ ಧನಸಹಾಯ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರ ಅಗತ್ಯ. ಆಸ್ತಿ ವಿಷಯಕ್ಕೆ ಜಗಳ . ವ್ಯಾಪಾರದಲ್ಲಿ ಮಂದ ಮಂದಗತಿ. ತಂದೆ ತಾಯಿ ಆರೋಗ್ಯದಲ್ಲಿ ಕಿರಿಕಿರಿ.ದೂರದ ಊರಿನಿಂದ ಆ ಶುಭವಾರ್ತೆ. ಮಾನಸಿಕ ಭಯ ಮುಂದುವರಿಕೆ.ಕೆಲವರಿಗೆ ಸಂತಾನಭಾಗ್ಯ. ವಿವಾಹ ಕಾರ್ಯಗಳಲ್ಲಿ ಯಶಸ್ಸು.ನಿಂತ ಕಾರ್ಯಗಳು ಮುಂದುವರಿಕೆ. ವ್ಯಾಪಾರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ. ಸ್ನೇಹಿತರೊಂದಿಗೆ ಅನಾವಶ್ಯಕ ಮಾತನಾಡಿ ಸಮಸ್ಯೆ ಸೃಷ್ಟಿ ಮಾಡಿಕೊಳ್ಳುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಎಚ್ಚರವಹಿಸಿ. ಸಾಲ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಖರ್ಚುವೆಚ್ಚಗಳ ಅಧಿಕವಾಗುತ್ತದೆ .ಅಧ್ಯಾತ್ಮದಲ್ಲಿ ಆಸಕ್ತಿ. ವಾಹನ ಅಪಘಾತ ಸಾಧ್ಯತೆ .ವಿದ್ಯಾರ್ಥಿಗಳು ಉತ್ತಮವಾದದ್ದನ್ನು ಸಾಧಿಸುವರು. ದೇವತಾದರ್ಶನ ಇಂದ ಸ್ವಲ್ಪ ನೆಮ್ಮದಿ.ಕೆಲವರಿಗೆ ಅನವಶ್ಯಕ ಭೀತಿ ಕಾಡುತ್ತಿದೆ. ಕುಟುಂಬದಲ್ಲಿ ನಡೆಯುತ್ತಿದ್ದ ಕಲಹದಿಂದ ನಿಯಂತ್ರಣಕ್ಕೆ ಬರುತ್ತದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಕುಟುಂಬದ ಸಂತೋಷಕ್ಕಾಗಿ ಕರ್ಚು. ಉದ್ಯೋಗಗಳಿಗೆ ಸಾಮಾನ್ಯ ಕಾಲ. ವ್ಯಾಪಾರದಲ್ಲಿ ಚೇತರಿಕೆಯಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mon.9353 488403

“ಸಿಂಹರಾಶಿ”:
ಮಘ ನಕ್ಷತ್ರ:1,2,3,4
ಹುಬ್ಬಾ ನಕ್ಷತ್ರ:1,2,3,4
ಉತ್ತರ ನಕ್ಷತ್ರ:1
ಎಲ್ಲಾ ಕೆಲಸ ಕಾರ್ಯಗಳು ಯಶಸ್ಸು.ಕುಟುಂಬದಲ್ಲಿ ಸಂತೋಷ .ಕೀರ್ತಿ ಪ್ರತಿಷ್ಠೆ. ವ್ಯಾಪಾರದಲ್ಲಿ ಅಧಿಕ ಲಾಭ. ಧನಲಾಭ ,ಕಂಕಣಭಾಗ್ಯ. ಆದಾಯದ ಹೊಸ ಮೂಲಗಳು ಕಂಡುಬಂದು ಐಶ್ವರ್ಯ ವೃದ್ಧಿಯಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರು ಗೌರವ ಪ್ರತಿಷ್ಠೆ ಅಧಿಕ. ಹಿತಶತ್ರುಗಳ ಕಿರಿಕಿರಿ .ಅಧಿಕಾರಿಗಳಿಂದ ಪ್ರಶಂಸೆ .ಪಿತ್ತದಿಂದ ಎದೆಯುರಿತ ಕಂಡುಬರುತ್ತದೆ. ಆರೋಗ್ಯದ ಕಡೆ ಗಮನವಿರಲಿ. ಸ್ತ್ರೀ ವರ್ಗದಿಂದ ಲಾಭ .ಆಕಸ್ಮಿಕ ಧನಲಾಭ. ಶತ್ರುಗಳನ್ನು ಗ್ರಹಿಸುವ ಸಾಮರ್ಥ್ಯ. ನಿವೇಶನ ಖರೀದಿಸಿ ಜೀವನದಲ್ಲಿ ಒಲವು ಕಂಡು ಬರುತ್ತದೆ. ಧನ ಲಾಭವಿದ್ದರೂ ಪಿತೃ ವರ್ಗದವರಿಗೆ ಆರೋಗ್ಯದಲ್ಲಿ ಕಿರಿಕಿರಿ ಇರುತ್ತದೆ. ತಂದೆಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಹಣ ಖರ್ಚು ಆಗುತ್ತದೆ. ವಿರೋಧಿಗಳಿಗೆ ತಂಟೆಗೆ ಹೋಗಬೇಡಿ. ಉದ್ಯೋಗ ಲಾಭ. ಆರೋಗ್ಯದ ನಿಮಿತ್ತ ಶಸ್ತ್ರಚಿಕಿತ್ಸೆ ಆಗುವ ಸಂಭವ .ವಿದೇಶಿ ವಸ್ತು ಖರೀದಿ ಮತ್ತು ಸ್ತ್ರೀಯರಿಗಾಗಿ ಹಣದ ಖರ್ಚು ಅಧಿಕವಾಗುತ್ತದೆ. ಪರಸ್ತ್ರೀಯಲ್ಲಿ ಆಸಕ್ತಿ ಕಂಡು ಬರುತ್ತದೆ .ವಿದ್ಯಾರ್ಥಿಗಳಲ್ಲಿ ಪ್ರೇಮಪ್ರಕರಣ ನಡೆಯುತ್ತದೆ. ಹಳೆಯ ನಿವೇಶನ ಆಧುನಿಕರಣ ಮಾಡುವ ಬಗ್ಗೆ ಚಿಂತನೆ ಮಾಡುವಿರಿ. ಕೃಷಿಕರು ಹೊಲದಲ್ಲಿ ಬೋರ್ವೆಲ್ ಕೊರೆಯುವ ಸಾಧ್ಯತೆ. ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಚಿಂತನೆ ಮಾಡುವಿರಿ. ವಿದೇಶಕ್ಕೆ ಹೋಗುವ ಅವಕಾಶ ಕಂಡುಬರುತ್ತದೆ. ಮಕ್ಕಳ ನಡುವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ವಿವಾಹ ವಿಚ್ಛೇದನ ಆದ ಮಕ್ಕಳ ಬಗ್ಗೆ ಮದುವೆ ಚಿಂತನೆ ಮಾಡುವಿರಿ ಮತ್ತು ಯಶಸ್ಸು ಕಾಣುವಿರಿ. ಮಕ್ಕಳ ಸಂತಾನ ಹರುಷ ತರಲಿದೆ. ಪತಿಪತ್ನಿಯರಲ್ಲಿ ಸರಸ ಸಾಮರಸ್ಯ ಅಧಿಕ. ಪ್ರಯಾಣದ ಸಾಧ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353 488403

“ಕನ್ಯಾ ರಾಶಿ”:
ಉತ್ತರ ನಕ್ಷತ್ರ:1,2,3,4
ಹಸ್ತ ನಕ್ಷತ್ರ:1,2,3,4
ಚಿತ್ತಾ ನಕ್ಷತ್ರ:1,2
ವರ್ಷದ ಪ್ರಾರಂಭದಲ್ಲಿ ಬಂಧುಗಳ ಮುಖಾಂತರ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವಿರಿ. ಕೆಲಸ ಕಾರ್ಯದಲ್ಲಿ ಮಂದ ಪ್ರಗತಿ ಕಾಣುವಿರಿ. ಅನಾರೋಗ್ಯ ,ಅಧಿಕ ಖರ್ಚು. ಕುಟುಂಬದ ಸದಸ್ಯರಲ್ಲಿ ಶಸ್ತ್ರಚಿಕಿತ್ಸೆಯ ಸಂಭವ ಇದೆ. ಮಾನಸಿಕ ತಳಮಳ ಮುಂದುವರೆಯುತ್ತದೆ. ಜನನಾಂಗ ಸಂಬಂಧ ವ್ಯಾಧಿಗಳ ಕಾಟ.ಸಮಾಜದಲ್ಲಿ ಅವಮಾನ ಘಟನೆ.ಸ್ತ್ರೀ ಸಂಬಂಧಿ ಅವಮಾನ ಕಾಡುವ ಸಂಭವ. ಮೂಲ ವ್ಯಾಧಿ ನಿಮಗೆ ಮಾನಸಿಕ ಹಿಂಸೆ ಕೊಡಲಿದೆ. ಅನಾವಶ್ಯಕ ಪ್ರಯಾಣದಿಂದಾಗಿ ಅಪಘಾತ ಸಂಭವ. ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು. ಶತ್ರುಗಳು ಒಳಸಂಚು ಮಾಡುವವರು ಎಚ್ಚರಿಕೆವಹಿಸಿ. ಮನಸ್ಸಿನಲ್ಲಿ ಅವ್ಯಕ್ತ ಭಯ. ಹಿರಿಯರಿಗೆ ಹಣ ಖರ್ಚು. ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಯಶಸ್ಸು. ಉದ್ಯೋಗದಲ್ಲಿ
ಬದಲಾವಣೆಯಾಗುವ ಸಾಧ್ಯತೆ. ಕುಟುಂಬದಿಂದ ಮನಸ್ಸಿಗೆ ಸಂತೋಷ. ಮಕ್ಕಳ ಸಾಧನೆ ನೋಡಿ ಸಂತೋಷ ಪಡುವಿರಿ. ವರ್ಷದ ಕೊನೆಯಲ್ಲಿ ಪತಿ-ಪತ್ನಿಯರಲ್ಲಿ ಬಿನ್ನಾಭಿಪ್ರಾಯ ಅಧಿಕವಾಗುವುದು. ಆದಾಯಕ್ಕೆ ಅವಕಾಶಗಳು ದೊರಕಲಿದೆ. ಸಹೋದರರೊಂದಿಗೆ ಅನಾವಶ್ಯಕ ವೈಮನಸ್ಸು. ಅಧಿಕಾರಿ ವರ್ಗದಿಂದ ಅನಾನುಕೂಲ. ಧಾರ್ಮಿಕ ಕಾರ್ಯಗಳು ಕೈಗೂಡುವುದು. ಮನೋಬಲ ಅಧಿಕವಾಗಿರುವುದು. ಸಂತಾನಭಾಗ್ಯ ಇರುವುದು. ವಿವಾಹ ಯೋಗವಿದೆ. ಅಲ್ಪ ಸಮದಿಂದ ಅಧಿಕ ಲಾಭ ದೊರೆಯುತ್ತದೆ. ಆಕಸ್ಮಿಕ ಧನಲಾಭ .ಕಷ್ಟಗಳು ಕರಗುವ ಕಾಲ .ಬಲದಿಂದ ಕೃಷಿ ,ವ್ಯಾಪಾರ,ಉದ್ಯೋಗದಲ್ಲಿ ಪ್ರಗತಿ.ಭೂ ಸಂಬಂಧಿ ವ್ಯಾಜ್ಯಗಳಲ್ಲಿ ಜಯ. ಶತ್ರು ದಮನ.ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಅಧಿಕ. ಮನೆಯಲ್ಲಿ ಶುಭ ಸಮಾರಂಭ ಪ್ರಗತಿ ಕಾಣುವುದು. ರಾಜಕೀಯ ಕ್ಷೇತ್ರದಲ್ಲಿರುವವರು ಗಣ್ಯ ವ್ಯಕ್ತಿಗಳ ಸಹಾಯ ಸಿಗಲಿದೆ. ಮಾತಾಪಿತೃರ ಬಗ್ಗೆ ಹೆಚ್ಚಿನ ಚಿಂತನೆ ಮಾಡುವಿರಿ. ಆತ್ಮೀಯರ ಕಡೆಯಿಂದ ಮೋಸ ಹೋಗುವ ಸಾಧ್ಯತೆ ಎಚ್ಚರವಹಿಸಿ. ವ್ಯಾಪಾರ ನಷ್ಟ. ನೂತನ ನಿವೇಶನ ಅಥವಾ ಜಮೀನು ಖರೀದಿಯಲ್ಲಿ ಎಚ್ಚರ. ಪುರುಷ ಪ್ರಯತ್ನಕ್ಕೆ ಆದ್ಯತೆ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು.
Mob.9353 488403

“ತುಲಾ ರಾಶಿ”:
ಚಿತ್ತಾ ನಕ್ಷತ್ರ:3,4
ಸ್ವಾತಿ ನಕ್ಷತ್ರ:1,2,3,4
ವಿಶಾಖಾ ನಕ್ಷತ್ರ:1,2,3
ವರ್ಷಾರಂಭದಲ್ಲಿ ತುಂಬಾ ಚಿಂತನೆಗಳು ಕಾಡಲಿದೆ. ಆರೋಗ್ಯದಲ್ಲಿ ಏರುಪೇರು, ಅಧಿಕಾರ ದಾಹ ,ಆಯಾಸ, ಸಾಲಭಾದೆ , ಕಾನೂನು ವಿಷಯದಲ್ಲಿ ವಿಳಂಬ. ವ್ಯಾಪಾರದಲ್ಲಿ ನಷ್ಟ .ಸ್ತ್ರೀ ಪಕ್ಷದಿಂದ ಕಿರಿಕಿರಿ .ಮಕ್ಕಳಿಂದ ಮಾನಹಾನಿ .ಗರ್ಭ ನಷ್ಟ. ಉದ್ಯೋಗದಲ್ಲಿ ಬೇಸರ. ಅವಮಾನದ ಘಟನೆಗಳು ಅನುಭವಿಸುವಿರಿ. ಮೇಲಾಧಿಕಾರಿ ಕಿರಿಕಿರಿ. ಬಂಧನದ ಭಯ ಅನುಭವಿಸುವಿರಿ. ಸ್ವಲ್ಪ ಸಮಯದ ನಂತರ ತಂದೆ ಮತ್ತು ಹಿರಿಯರಿಂದ ಧನಸಹಾಯ. ಮನೆಯ ಹಿರಿಯ ಬಂಧುಗಳ ಸಹಾಯ .ಉದ್ಯೋಗದಲ್ಲಿ ನೆಮ್ಮದಿ .ಕೌಟುಂಬಿಕ ಕಲಹ ಕಡಿಮೆಯಾಗುತ್ತದೆ.ಶುಭವಾರ್ತೆ ಯಿಂದ ಮನಸ್ಸಿಗೆ ಸಂತಸ. ಹಿರಿಯರು ಸ್ನೇಹಿತರ ನೆರವಿನಿಂದ ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ಪೀಡೆ ಇರುವವರು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ರಾಜಕಾರಣಿಗಳಿಗೆ ಮಂತ್ರಿಪದವಿ ಸಿಗುವ ಸಾಧ್ಯತೆ. ವರ್ಷದ ಕೊನೆಯಲ್ಲಿ ದುಡುಕಿನ ನಿರ್ಧಾರದಿಂದ ಹಣವ್ಯಯ ಅಧಿಕವಾಗುತ್ತದೆ.ಅನಾವಶ್ಯಕ ಪ್ರಯಾಣದಿಂದ ಹಣ ಮತ್ತು ಆರೋಗ್ಯದಲ್ಲಿ ತೊಂದರೆ. ಪ್ರಿಂಟಿಂಗ್ ಮತ್ತು ಸ್ಟೇಷನರಿ ವ್ಯಾಪಾರಸ್ಥರಿಗೆ ನಷ್ಟದ ಭೀತಿ. ಪತ್ನಿಯ ಬಂಧು ಬಳಗದಿಂದ ಧನಸಹಾಯ ಅಧಿಕವಾಗುತ್ತದೆ. ವಿದ್ಯಾರ್ಥಿಗಳು ತಕ್ಕಮಟ್ಟಿಗೆ ಯಶಸ್ಸು ದೊರೆಯುತ್ತದೆ. ಮೇಲಾಧಿಕಾರಿ ವರ್ಗದವರಿಂದ ಕಿರಿಕಿರಿ ಇರುತ್ತದೆ. ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯ ಅಧಿಕವಾಗುವುದು. ಆದಾಯಕ್ಕೆ ಹೊಸ ಆಕಾಶಗಳು ದೊರಕಲಿದೆ. ಸಹೋದರರೊಂದಿಗೆ ಅನಾವಶ್ಯಕ ವೈಮನಸ್ಸು. ಅಧಿಕಾರಿ ವರ್ಗದಿಂದ ಅನುಕೂಲ. ಇಚ್ಚಿತ ಕಾರ್ಯಗಳು ಕೈಗೂಡುವುದು. ಮನೋಬಲ ಅಧಿಕವಾಗುವುದು. ಸಂತಾನಭಾಗ್ಯ ಇರುವುದು. ವಿವಾಹ ಯೋಗವಿದೆ. ಅಲ್ಪ ಪ್ರಯತ್ನದಿಂದ ಅಧಿಕ ಲಾಭ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು.
Mob.9353 488403

“ವೃಶ್ಚಿಕ ರಾಶಿ”:
ವಿಶಾಖಾ ನಕ್ಷತ್ರ:4
ಅನುರಾಧ ನಕ್ಷತ್ರ:1,2,3,4
ಜೇಷ್ಠ ನಕ್ಷತ್ರ:1,2,3,4
ವರ್ಷಾರಂಭದಲ್ಲಿ ಹಣಕಾಸಿನ ಪ್ರಗತಿ ಕಾಣುವಿರಿ.ನೆಮ್ಮದಿ ಸಿಗಲಿದೆ. ಶತ್ರು ವರ್ಗ ನಿಯಂತ್ರಣವಿರುತ್ತದೆ. ಸೋದರರಿಂದ ನೆರವು. ಪ್ರಯಾಣದಿಂದ ಲಾಭವಿರುತ್ತದೆ. ಆದರೆ ಭಾಗ್ಯದಲ್ಲಿ ಕೊರತೆ ಕಂಡುಬರುತ್ತದೆ. ಎಲ್ಲಾ ಕಾರ್ಯಗಳಿಗೆ ಪ್ರಯತ್ನ ಅಧಿಕವಾಗಿರಬೇಕು. ಭಾಗ್ಯದ ಬಗ್ಗೆ ಚಿಂತನೆ. ಹಳೆ ನೆನಪುಗಳು ಕಾಡುತ್ತವೆ. ಸಣ್ಣ ಸಣ್ಣ ವಿಷಯದೊಂದಿಗೆ ಪತ್ನಿಯೊಂದಿಗೆ ಜಗಳ. ಪಾಲಕರಿಗೆ ಕಿರಿಕಿರಿ . ಮಾತಾಪಿತೃ ಎದೆ ಶಸ್ತ್ರಚಿಕಿತ್ಸೆ ಆಗುವ ಸಂಭವ . ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ನಷ್ಟ. ವಾಹನ ಚಾಲಕರಿಗೆ ಹಾನಿ ಸಂಭವ. ಬಂದ ವರ್ಗದಲ್ಲಿ ಅನಾವಶ್ಯಕವಾಗಿ ಮಾನಸಿಕ ವ್ಯಾಧಿಗಳು ಕಂಡುಬರುತ್ತದೆ. ನ್ಯಾಯಾಲಯದ ಕಚೇರಿ ಕೆಲಸದಿಂದ ನೆಮ್ಮದಿ ಕಂಡುಬರುತ್ತದೆ. ವರ್ಷದ ಕೊನೆಯಲ್ಲಿ ಚಿಂತಾಮಯವಾಗಿ ಕಾಲ ಕಳೆಯುವಿರಿ. ತಮಗೆ ಚಿಂತೆ, ವಾದ-ವಿವಾದಗಳು,ಅಪಜಯ, ಸಾಲಭಾದೆ,ರಕ್ತದೋಷ,ಆರ್ಥಿಕ ಮುಗ್ಗಟ್ಟು, ವ್ಯಾಪಾರದಲ್ಲಿ ನಷ್ಟ, ಪ್ರೇಮ ಪ್ರಕರಣದಲ್ಲಿ ವಿರಸ ಕಾಣುವುದು. ಹಿರಿಯರ ಸಾವಿನ ಸುದ್ದಿ ಅಸಮಾಧಾನ ತರುವುದು. ಮಕ್ಕಳ ದುಡುಕಿನಿಂದ ಕೋರ್ಟ್ ಕಚೇರಿ ಪೊಲೀಸ್ ಸ್ಟೇಷನ್ ಹತ್ತುವ ಸಂಭವವಿರುತ್ತದೆ. ಸಣ್ಣಪುಟ್ಟ ವಿಷಯ ಪತ್ನಿಯೊಂದಿಗೆ ಕಲಹ ಸೃಷ್ಟಿಯಾಗುತ್ತದೆ .ಸ್ನೇಹಿತ ವರ್ಗದಿಂದ ಮೋಸ.ಮನಸ್ಸು ಅವ್ಯಕ್ತ ಭಯದಿಂದ ಬಳಲಿಕೆ. ವ್ಯಾಪಾರಿಗಳಿಗೆ ಆರ್ಥಿಕ ಮುಗ್ಗಟ್ಟು .ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಪಜಯ. ಸಹೋದರನ ಆರೋಗ್ಯದ ತೊಂದರೆ ಕಾಡಲಿದೆ. ದುರದೃಷ್ಟ ಕಾಡುವುದು.ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ವಾಮಾಚಾರದ ಭಯ. ಮನೆಯಲ್ಲಿ ಹಣದ ಕೊರತೆ. ಆರ್ಥಿಕ ಕುಸಿತ. ಬಂಧುಗಳೊಂದಿಗೆ ಅದಾದ ಸೋಲಿನ ಅನುಭವ ಅಧಿಕವಾಗುವುದು ಕಂಡುಬರುವುದು. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ.ಜನರಿಂದ ಮೋಸ ಹೋಗುವುದು ಜಾಸ್ತಿಯಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು
Mob.9353 488403

“ಧನಸು ರಾಶಿ”:
ಮೂಲಾ ನಕ್ಷತ್ರ,:1,2,3,4
ಪೂರ್ವಾಷಾಡ ನಕ್ಷತ್ರ:1,2,3,4
ಉತ್ತರಾಷಾಡ ನಕ್ಷತ್ರ:1
ವರ್ಷದ ಪ್ರಾರಂಭದಲ್ಲಿ ತುಂಬಾ ಕಷ್ಟ ಅನುಭವಿಸುವಿರಿ. ಸಾಲಬಾಧೆಯಿಂದ ನರಳುವಿರಿ. ಮೂಲವ್ಯಾದಿ, ರಕ್ತದೋಷ ಎದೆನೋವಿನಿಂದ ಆಸ್ಪತ್ರೆಗೆ ತುಂಬಾ ಹಣ ಖರ್ಚು ಮಾಡುವ ಸಾಧ್ಯತೆ.ಗುರುಹಿರಿಯರ ಮತ್ತು ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ತಂದೆ ಆರೋಗ್ಯದಲ್ಲಿ ಏರುಪೇರು. ತಂದೆಗೆ ಹೃದಯ ತೊಂದರೆ ಆಗುವ ಸಂಭವ. ಕುಟುಂಬದವರಗೋಸ್ಕರ ಹೊಸ ನಿವೇಶನ ಖರೀದಿಸುವ ಚಿಂತನೆ ಯಶಸ್ವಿಯಾಗಲಿದೆ. ಅಧಿಕಾರಿಗಳೊಂದಿಗೆ ವಾಗ್ವಾದ. ಉದ್ಯೋಗದಲ್ಲಿ ಮಧ್ಯಸ್ತಿಕೆ ಜನರಿಂದ ಕೆಟ್ಟಹೆಸರು .ಸುಳ್ಳು ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಒತ್ತಡಗಳ ಮಧ್ಯೆ ಕೆಲಸ. ಅಧಿಕಾರಿಗಳ ಪ್ರಶಂಸೆ. ಭೂಮಿ ಮನೆ ವ್ಯವಹಾರಗಳಲ್ಲಿ ಸ್ವಲ್ಪ ಸರಳ. ಪತ್ನಿ ವರ್ಗದಿಂದ ಸಹಾಯಧನ. ಆರೋಗ್ಯದಲ್ಲಿ ಚೇತರಿಕೆ. ವಿದ್ಯಾರ್ಥಿಗಳು ಸ್ವಲ್ಪ ಅಭ್ಯಾಸ ಆಸಕ್ತಿ. ಲೇವಾದೇವಿ ಮತ್ತು ವ್ಯಾಪಾರಿಗಳಿಗೆ ಸ್ವಲ್ಪ ನೆಮ್ಮದಿ. ಯುವಕರ ಮನಸ್ಸು ಚಂಚಲ. ಪ್ರೀತಿ-ಪ್ರೇಮ-ಪ್ರಣಯದಲ್ಲಿ ವಿರಹ ಕಾಡಲಿದೆ. ನಾಲ್ಕು ಚಕ್ರದ ವಾಹನ ಖರೀದಿ ವರ್ಷದ ಮಧ್ಯಭಾಗದಲ್ಲಿ ಸಾಧ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು
Mob.9353 488403

“ಮಕರ ರಾಶಿ’:
ಉತ್ತರಾಷಾಡ ನಕ್ಷತ್ರ:2,3,4
ಶ್ರವಣ ನಕ್ಷತ್ರ;1,2,3,4
ಧನಿಷ್ಠಾ ನಕ್ಷತ್ರ:1,2
ವರ್ಷಾರಂಭದಲ್ಲಿ ಕೊಂಚ ಮಟ್ಟಿಗೆ ಶುಭವಾಗಿರುತ್ತದೆ. ಪತ್ನಿಯ ಸಹಕಾರದಿಂದ ಪೆಂಡಿಂಗ್ ಇರತಕ್ಕಂತ ಕೆಲಸಕಾರ್ಯಗಳು ಯಶಸ್ವಿಯಾಗುವುದು. ಸರಕಾರಿ ನೌಕರರರಿಗೆ ಅಧಿಕಾರಿಗಳಿಂದ ಒಳ್ಳೆಯ ಪ್ರಶಸ್ತಿ ಲಭಿಸಲಿದೆ. ಈ ವರ್ಷದಲ್ಲಿ ಮನೆ ಅಥವಾ ಭೂಮಿ ಖರೀದಿಸುವಲ್ಲಿ ಯಶಸ್ವಿಯಾಗುವಿರಿ. ನವ ದಂಪತಿಗಳಿಗೆ ಸಂತಾನಭಾಗ್ಯ ಲಭಿಸಲಿದೆ. ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಕಿರಿಕಿರಿ ಸಂಭವ ಆಗುತ್ತದೆ ನೀವು ಸಮಾಧಾನ ವಾಗಿದ್ದರೆ ಒಳಿತು. ಹಿತ ಶತ್ರುಗಳ ಕಾಟ ಅಧಿಕವಾಗಿರುತ್ತದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವರ್ಷದ ಅರ್ಧ ಭಾಗದಲ್ಲಿ ಆರ್ಥಿಕ ಚಿಂತನೆ. ತಂದೆ ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಮುಂದುವರೆದ ಕಿರಿಕಿರಿ. ಮಾತಿನಲ್ಲಿ ನಿಯಂತ್ರಣವಿದ್ದರೆ ಉತ್ತಮ. ಅತಿಯಾದ ಪ್ರಯಾಣ ಬೇಡ. ತಮಗೆ ಸಣ್ಣಪುಟ್ಟ ಗಾಯ. ಶಾರೀರಿಕ ಪೀಡೆ. ಮಾತೃ ವರ್ಗದಿಂದ ಧನಸಹಾಯ. ಹಿರಿಯ ಅಧಿಕಾರಿಗಳ ಕಿರಿಕಿರಿ. ದ್ವಿಚಕ್ರ ವಾಹನ ಖರೀದಿ ಯೋಗ. ಆತ್ಮೀಯ ಬಂಧು ಬಳಗದಿಂದ ವರ್ಷದ ಕೊನೆಯಲ್ಲಿ ಮೋಸ ಹೋಗುವ ಸಾಧ್ಯತೆ ಎಚ್ಚರಿಕೆಯಿಂದ ವ್ಯವಹಾರ ಮಾಡಿರಿ. ಪ್ರೇಮಿಗಳ ಹಿರಿಯರ ಸಮಸ್ಯೆ ಕಾಡಲಿದೆ. ಹೊಸ ವಸ್ತು ಖರೀದಿಗೆ ಹಣ ಖರ್ಚಾಗುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಸ್ಥಗಿತ ವಾಗುವುದು. ರಾಜಕಾರಣಿಗಳ, ಅಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು. ಮಾವನಿಂದ ಮನಸ್ಸು ಸ್ವಲ್ಪ ನೆಮ್ಮದಿಯಾಗಿರುವಿರಿ. ಉದ್ಯೋಗದ ಒತ್ತಡ ಅಧಿಕವಾಗಿರುತ್ತದೆ. ಮನಸ್ಸು ವೈರಾಗ್ಯ ಭಾವ ತಾಳುತ್ತದೆ. ಕೆಲಸ ಕಾರ್ಯಗಳಲ್ಲಿ ವಿಘ್ನ ಅಧಿಕವಾಗಿರುತ್ತದೆ. ಶತ್ರುಗಳು ನಿಯಂತ್ರಣಕ್ಕೆ ಬರುತ್ತಾರೆ. ವಾದ-ವಿವಾದಗಳಲ್ಲಿ ಮುಖಭಂಗ. ವ್ಯಾಪಾರದಲ್ಲಿ ಪ್ರಗತಿ ಕುಂಠಿತ. ರಾಜಕೀಯ ಕ್ಷೇತ್ರದಲ್ಲಿ ಕಿರಿಕಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.9353 488403

“ಕುಂಭ ರಾಶಿ”:
ಧನಿಷ್ಠಾ ನಕ್ಷತ್ರ:3,4
ಶತಬಿಶ ನಕ್ಷತ್ರ:1,2,3,4
ಪೂರ್ವ ಭಾದ್ರಪದ ನಕ್ಷತ್ರ:1,2,3
ವರ್ಷದ ಪ್ರಾರಂಭದಲ್ಲಿ ಬಹಳ ಉತ್ತಮ ನಿರೀಕ್ಷಣೆ ಮಾಡುವಿರಿ. ಇಚ್ಛಿಸಿದ ಕಾರ್ಯಗಳು ಕೈಗೂಡುವುದು. ಅತಿಯಾದ ಪ್ರಯಾಣದಿಂದ ಆಯಾಸ ಎದೆ ನೋವಿನ ಸಮಸ್ಯೆ ಕಾಡಲಿದೆ. ಆಕಸ್ಮಿಕ ಧನಲಾಭ. ಉದ್ಯೋಗದಲ್ಲಿ ಪ್ರಗತಿ. ಅನಿರೀಕ್ಷಿತ ಹಣಕಾಸಿನ ಪ್ರಗತಿ. ಪ್ರೇಮ ಪ್ರಕರಣದಲ್ಲಿ ಯಶಸ್ಸು. ಆರೋಗ್ಯದಲ್ಲಿ ಕಿರಿಕಿರಿ. ಪತಿ-ಪತ್ನಿ ಶಸ್ತ್ರಚಿಕಿತ್ಸೆ ಆಗುವ ಸಂಭವ.ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಂಡುಬರುತ್ತದೆ. ವರ್ಷದ ಕೊನೆಯಲ್ಲಿ ಆರೋಗ್ಯದಲ್ಲಿ ಏರುಪೇರು ಮುಂದುವರಿಕೆ. ಮಾಟ-ಮಂತ್ರಗಳ ದೋಷ. ಕುಟುಂಬದಲ್ಲಿ ಅನಾವಶ್ಯಕ ಜಗಳ ಪಾರಂಭ. ಆಸ್ತಿ ವಿಷಯವಾಗಿ ಸಹೋದರನೊಂದಿಗೆ ಜಗಳ. ಚಿಕ್ಕ ವ್ಯಾಪಾರಗಳಿಗೆ ಶುಭಫಲ. ದೊಡ್ಡ ವ್ಯಾಪಾರಿಗಳಿಗೆ ಶ್ರಮ ಅಗತ್ಯ.ಕಿವಿಗೆ ಸಂಬಂಧಿಸಿದ ವ್ಯಾಧಿ ಕಂಡುಬರುವುದು. ಉದ್ಯೋಗದಲ್ಲಿ ತೊಂದರೆ. ವಾದ-ವಿವಾದಗಳಿಂದ ಮುಖಭಂಗ. ಯಾರೋ ಮಾಡಿರುವಂತಹ ಅಪವಾದ ತಾವು ಗುರಿಯಾಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob.9353 488403

“ಮೀನ ರಾಶಿ”:
ಪೂರ್ವ ಭಾದ್ರಪದ ನಕ್ಷತ್ರ:4
ಉತ್ತರಭಾದ್ರಪದನಕ್ಷತ್ರ1,2,3,4
ರೇವತಿ ನಕ್ಷತ್ರ:1,2,3,4
ವರ್ಷದ ಪ್ರಾರಂಭದಲ್ಲಿ ಉತ್ಸಾಹರಹಿತವಾಗಿ ಕಾಲ ಕಳೆಯುವಿರಿ. ದೂರದ ಪ್ರಯಾಣ ಮಾಡಬೇಡಿ ದೊಡ್ಡ ಪ್ರಮಾಣದಲ್ಲಿ ಅಪಘಾತವಾಗುವ ಸಂಭವ ಇದೆ. ಯಾರಿಗೂ ಮಧ್ಯಸ್ತಿಕೆ ವಹಿಸಿ ಸಾಲ ಕೊಡಿಸಬೇಡಿ, ಜಾಮೀನು ನೀಡಬೇಡಿ,ಶುರಿಟಿ ಬೇಲು ನೀಡಬೇಡಿ. ಹೆಂಡತಿಯ ಸಹಾಯದಿಂದ ಹಣಕಾಸಿನ ಸಹಾಯ ಸಿಗಲಿದೆ. ಸೋದರಮಾವನ ಸಹಾಯ ದೊರೆಯುತ್ತದೆ.ಆಕಸ್ಮಿಕ ಧನಪ್ರಾಪ್ತಿ. ವೈರಿ ಕಿರಿಕಿರಿ ಇರುತ್ತದೆ. ಉದ್ಯೋಗದಲ್ಲಿ ದೂರದ ಊರಿಗೆ ವರ್ಗಾವಣೆಯಿಂದ ತೊಂದರೆ. ಸ್ಥಾನಪಲ್ಲಟದಿಂದ ಅಪವಾದಗಳು ಬೆನ್ನು ಹತ್ತುತ್ತದೆ. ಆತ್ಮೀಯ ಜನರಿಂದ ಮೋಸಹೋಗುವುದು. ಮಾನವೀಯ ಮೌಲ್ಯದ ಮೇಲೆ ವಿಶ್ವಾಸ ಇಲ್ಲದಿರುವುದು. ಕುಟುಂಬ ವರ್ಗದವರ ಜೊತೆ ಮಾತಿನ ಚಕಮಕಿ.ವ್ಯಾಪಾರ ವ್ಯವಹಾರಗಳ ನಷ್ಟದಿಂದ ಜೀವನ ಬೇಸರ. ವಿದ್ಯಾರ್ಥಿಗಳಿಗೆ ದುರಭ್ಯಾಸ ಪ್ರಾರಂಭವಾಗುವುದು. ನೀವು ನಿಮ್ಮ ಮಕ್ಕಳ ನಡವಳಿಕೆಯ ಬಗ್ಗೆ ಚಿಂತನೆ. ವರ್ಷದ ಕೊನೆಯಲ್ಲಿ ಶಾರೀರಿಕ ಪೀಡೆ ಜಾಸ್ತಿಯಾಗುವುದು. ಹಿಂದೆ ಗತಿಸಿದ ಘಟನೆಗಳಿಂದಲೇ ಮನೋವೇದನೆ ಅಧಿಕವಾಗುವುದು. ಶಸ್ತ್ರಚಿಕಿತ್ಸೆ ಸಂಭವ.ಕೆಲವರಿಗೆ ಶೀತಜ್ವರ ಕಾಡುವುದು. ಉದ್ಯೋಗದಲ್ಲಿ ಒತ್ತಡಗಳ ನಡುವೆಯೂ ಸಮಾಧಾನ. ವ್ಯಾಪಾರದಲ್ಲಿ ಉತ್ತಮ ಲಾಭ. ಪುಸ್ತಕ ವ್ಯಾಪಾರಿಗಳಿಗೆ ಶುಭ. ಕುಟುಂಬದ ಸದಸ್ಯರೊಂದಿಗೆ ಕಲಹ .ದೇವರ ದರ್ಶನ ಪ್ರಾಪ್ತಿ. ವಾಹನ ಜಾಗ್ರತೆಯಿಂದ ಚಲಾಯಿಸಿ. ಗರ್ಭಿಣಿ ಸ್ತ್ರೀಯರು ಜಾಗರೂಕತೆ ವಹಿಸಬೇಕು. ಕೆಲವರಿಗೆ ಗರ್ಭಪಾತ ಸಂಭವ. ಆಕಸ್ಮಿಕ ಧನಲಾಭ.ಉದ್ಯೋಗದಲ್ಲಿ ಭಡ್ತಿ. ಸಂಬಳ ಸೌಲಭ್ಯ ಅಧಿಕವಾಗುವುದು. ಪ್ರೇಮಿಗಳಿಗೆ ಪರ್ವಕಾಲ. ಸಮಾಜದಲ್ಲಿ ವಿಶೇಷ ಕೀರ್ತಿ ಸನ್ಮಾನ ಪಡೆದುಕೊಳ್ಳುವಿರಿ. ಬಂಧುಗಳೊಡನೆ ಅನಾವಶ್ಯಕ ಮಾತಿನಿಂದ ಮನಸ್ತಾಪ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.9353 488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top