ದಾವಣಗೆರೆ; ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಎಸ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ಹೆಸರಿನಲ್ಲಿರುವ ಹಾಗೂ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ನೋಂದಣಿ ರದ್ದುಪಡಿಸಲ್ಪಟ್ಟ ‘ಟಾಟಾ ಸ್ಕೂಲ್ ಬಸ್ (TATA School Bus) ಅನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು, ದಿನಾಂಕ 22ನೇ ಫೆಬ್ರವರಿ 2023ರ ಬುಧವಾರ ಸಂಜೆ 6.00 ಗಂಟೆಗೆ ದಾವಣಗೆರೆ ಪಿ.ಜೆ. ಬಡಾವಣೆ, 2ನೇ ಮುಖ್ಯ ರಸ್ತೆಯಲ್ಲಿ ಇರುವ ಬಾಪೂಜಿ ವಿದ್ಯಾಸಂಸ್ಥೆಯ ಒಳಾಂಗಣದಲ್ಲಿ ಹರಾಜು ಮೂಲಕ ಮಾರಾಟ ಮಾಡಲಾಗುವುದು ಪತ್ರಿಕಾ ಜಾಹೀರಾತಿನಲ್ಲಿ ತಿಳಿಸಲಾಗಿದೆ.
ವಾಹನವನ್ನು ಬೆಳಿಗ್ಗೆ 10.00 ಗಂಟೆಗೆಯಿಂದ ಸಂಸ್ಥೆಯ ಕಚೇರಿ ಆವರಣದಲ್ಲಿ ಹರಾಜು ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಖುದ್ದಾಗಿ ಕಚೇರಿಯಲ್ಲಿ ಪಡೆಯಬಹುದಾಗಿದೆ. ಹರಾಜಿನಲ್ಲಿ ಭಾಗವಹಿಸುವವರು ಕೆಳಕಂಡ ಷರತ್ತುಗೊಳಪಟ್ಟಿರುತ್ತಾರೆ. (1) ಹರಾಜಿನಲ್ಲಿ ಭಾಗವಹಿಸುವವರು ರೂ.10,000.00 (ಹತ್ತು ಸಾವಿರ ರೂಪಾಯಿ)ಗಳನ್ನು ನಗದಾಗಿ ಹರಾಜಿಗೆ ಮುನ್ನ ಠೇವಣಿ ಇಟ್ಟು ರಸೀದಿ ಪಡೆದವರಾಗಿರಬೇಕು. (2) ಹರಾಜು ಯಾರಿಗೆ ನಿಲ್ಲುತ್ತದೆಯೋ ಅವರು ಕೊಳ್ಳಲು ಒಪ್ಪಿದ ಮೊಬಲಗಿನ ಶೇಕಡಾ 25 ಭಾಗ ಹಣವನ್ನುಹರಾಜು ಮುಗಿದ ತಕ್ಷಣ ಡಿ.ಡಿ. ಮುಖಾಂತರ ಕೊಡತಕ್ಕದ್ದು, ಹಾಗೆ ಮಾಡದಿದ್ದಲ್ಲಿ ಹರಾಜು ರದ್ದುಗೊಳಿಸಲಾಗುತ್ತದೆ ಮತ್ತು ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. (3) ಶೇಕಡಾ 25 ಭಾಗವನ್ನು ಕಟ್ಟಿದ ನಂತರ ಕೊಳ್ಳಲು ಒಪ್ಪಿರುವವರು ಉಳಿದ ಹಣವನ್ನು ಒಂದು ವಾರದೊಳಗೆ ಡಿ.ಡಿ. ಮುಖಾಂತರ ಪಾವತಿ ಮಾಡಿ ಸಂಬಂಧಿಸಿದ ವಾಹನವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳತಕ್ಕದ್ದು. (4) ಒಂದು ವೇಳೆ ಒಂದು ವಾರದಲ್ಲಿ ಉಳಿದ ಹಣವನ್ನು ಸಂಸ್ಥೆಗೆ ಕಟ್ಟಲು
ತಪ್ಪಿದಲ್ಲಿ ಈ ವಿಷಯದ ಬಗ್ಗೆ ಯಾವ ನೋಟೀಸ್ ಕೊಡದೆ ಕಟ್ಟಿದ ಎಲ್ಲಾ ಹಣವನ್ನು ಸಂಸ್ಥೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. (5) ಸವಾಲುಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಸಂಪೂರ್ಣ ಹಕ್ಕನ್ನು ಕೆಳ ಸಹಿದಾರರು ಕಾಯ್ದಿರಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆಯಾವುದೇ ತಕರಾರುಗಳನ್ನು ಅಂಗೀಕರಿಸುವುದಿಲ್ಲ ಎಂದು ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.



