ದಾವಣಗೆರೆ; ದಾವಣಗೆರೆ ಸಂಚಾರ ಪೊಲೀಸ್ ವತಿಯಿಂದ ಹೆಲ್ಮೆಟ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಎಸ್ಪಿ ಸಿ. ಬಿ. ರಿಷ್ಯಂತ್ ಐಪಿಎಸ್ ಸಂಚಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಐಎಸ್ ಐ ಮಾರ್ಕ್ ನ ಗುಣಮಟ್ಟದ ಹೆಲ್ಮೆಟ್ ವಿತರಿಸಿದರು.
ನಂತರ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಐ ಎಸ್ ಐ ಮಾರ್ಕ್ ಹೆಲ್ಮೆಟ್ ಗಳನ್ನೆ ಧರಿಸಬೇಕು. ಸಾರ್ವಜನಿಕರು ಅಷ್ಟೇ ಅಲ್ಲ, ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜನರಲ್ಲಿ ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ…? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೋವನ್ನು ಸಾರ್ವಜನಿಕರು ಶೇರ್ ಮಾಡಿದ್ರೆ, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ, ನಗರ ಪೊಲೀಸ್ ಉಪಧೀಕ್ಷಕ ಮಲ್ಲೇಶ್ ದೊಡ್ಮನಿ, ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ , ಆರ್ ಪಿ ಐ ಸೋಮಶೇಖರ, ಪಿ ಎಸ್ ಐ ವಿರಬಸಪ್ಪ ಕುಸಲಾಪುರ, ಜಯಪ್ಪ ನಾಯ್ಕ್, ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



