ದಾವಣಗೆರೆ: ಶ್ರೀ ಬಸವೇಶ್ವರ ಗ್ರಾಮಾಂತರ ವಿದ್ಯಾ ಸಂಸ್ಥೆಯ ಜಗಳೂರು ತಾಲ್ಲೂಕಿನ ಬಸವನಕೋಟೆಯ ಬೊಮ್ಮಲಿಂಗೇಶ್ವರ ಪ್ರೌಢಶಾಲೆ ಹಾಗೂ ದಾವಣಗೆರೆ ತಾಲ್ಲೂಕಿನ ಆಲೂರಿನ ಶ್ರೀ ಆಂಜನೇಯ ಪ್ರೌಢಶಾಲೆಯಲ್ಲಿ ಖಾಲಿ ಇರುವ ಎರಡು ಇಂಗ್ಲೀಷ್ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ಅದೇಶದ ಅನ್ವಯ ಫೆ.07ರಿಂದ 21ದಿನದೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಂದು ಪ್ರತಿಯನ್ನು ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರು, ದಾವಣಗೆರೆ ಹಾಗೂ ಇನ್ನೊಂದು ಪ್ರತಿಯನ್ನು ಶ್ರೀ ಬಸವೇಶ್ವರ ಗ್ರಾಮಾಂತರ ವಿದ್ಯಾಸಂಸ್ಥೆ, ಹಾಲೇಕಲ್ಲು ಜಗಳೂರು ತಾಲ್ಲೂಕು , ಇಲ್ಲಿಗೆ ಸಲ್ಲಿಸಬೇಕು. ಮೂಲ ದಾಖಲೆಯೊಂದಿಗೆ 500 ರೂ. ಡಿಡಿಯನ್ನು ರಿಜಿಸ್ಟರ್ ಅಂಚೆ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 7785218494 ಸಂಪರ್ಕಿಸಿ.



