ದಾವಣಗೆರೆ: ಕರ್ನಾಟಕ ಸಹಕಾರ ಎಣ್ಣೆ ಬೀಜ ಮಹಾಮಂಡಳಿ ನಿ. ದಾವಣಗೆರೆ ಎಣ್ಣೆ ಸಂಕೀರ್ಣದ 6,600 ಚ. ಅಡಿಯ ಹಳೇ ಗೋದಾಮನ್ನು ನೆಲಸಮ ಮಾಡಲಾಗುತ್ತಿದೆ. ಉಪಯೋಗವಿಲ್ಲದ ವಸ್ತುಗಳನ್ನು ಹೊರ ಹಾಕಿ ಹಾಗೂ ಉಪಯೋಗದ ವಸ್ತಗಳಿಗೆ ಫೆ .04 ರಂದು ದರಪಟ್ಟಿ ಪ್ರಕಟಿಸಲಾಗುತ್ತಿದೆ. ಹೀಗಾಗಿ ಆಸಕ್ತರು ಫೆ .04ರ ಮಧ್ಯಾಹ್ನ 12 ಗಂಟೆಯೊಳಗೆ ದರ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ( ಜಿಎಸ್ ಟಿ ಸೇರಿ) ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಎಣ್ಣೆ ಸಂಕೀರ್ಣ, ಕೆಒಎಫ್, ಎಂಪಿಎಂಪಿ ರಸ್ತೆ ದಾವಣಗೆರೆ , ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ದರ ಪಟ್ಟಿ ಪ್ರಕಟಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8073093473 ಸಂಪರ್ಕಿಸಿ.




