Connect with us

Dvgsuddi Kannada | online news portal | Kannada news online

ಇಂದಿನಿಂದ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿ ಚಾಲನೆ; 9 ದಿನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ..

ದಾವಣಗೆರೆ

ಇಂದಿನಿಂದ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿ ಚಾಲನೆ; 9 ದಿನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ..

ದಾವಣಗೆರೆ: ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಇಂದಿನಿಂದ (ಜ.28ರಿಂದ ಫೆ.5ರವರೆಗೆ) ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿಯಾಗಿ ನಡೆಯಲಿದೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷ ಸರಳವಾಗಿ ಆಚರಿಸಿದ್ದ ಹುಣ್ಣಿಮೆ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ. ಇಂದು ಸಂಜೆ 6ಕ್ಕೆ ಮಹೋತ್ಸವ ಉದ್ಘಾಟನೆ ಆಗಲಿದೆ. ವಿಜಯಪುರದ ನಿರ್ಭಯಾನಂದ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಮಾಡಾಳು ವಿರೂಪಾಕ್ಷಪ್ಪ, ಪಿ.ಟಿ.ಪರಮೇಶ್ವರ ನಾಯ್ಕ್, ಎಂ.ಚಂದ್ರಪ್ಪ, ಸತೀಶ್‌ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಕಾದಂಬರಿಕಾರ ಬಿ.ಎಲ್‌.ವೇಣು, ಪತ್ರಕರ್ತ ರಂಗನಾಥ್‌ ಭಾರದ್ವಾಜ್‌, ಹಿರೇಮಗಳೂರು ಕಣ್ಣನ್‌ ಉಪನ್ಯಾಸ ನೀಡಲಿದ್ದಾರೆ.

ಜ.29ರಂದು ಸಂಜೆ 6ಕ್ಕೆ ಮಠಾಧೀಶರ ಚಿಂತನ ಗೋಷ್ಠಿ ಇದೆ. ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ, ಚೌಡಯ್ಯ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಬಸವಲಿಂಗ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಸೇವಾಲಾಲ್‌ ಸ್ವಾಮೀಜಿ, ಸವಿತಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ಜ.30ರಂದು ಸಂಜೆ 6ಕ್ಕೆ ಮಹಿಳಾ ಗೋಷ್ಠಿ ನಡೆಯಲಿದೆ. ಬೌದ್ಧ ಬಿಕ್ಕು ತೇನ್‌ಸಿಂಗ್‌ ಯೆಶಿ, ಮೌಲಾನ ಮಹಮ್ಮದ್‌ ಅನ್ವರ್‌ ಆಸಾದಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಎಸ್‌.ವಿ.ರಾಮಚಂದ್ರಪ್ಪ, ಎನ್‌.ವೈ.ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ನಾಗಶ್ರೀ ತ್ಯಾಗರಾಜ್‌ ಇಂದುಶ್ರೀ, ಡಾ.ಸಿ.ಎನ್‌.ಪಾಟೀಲ ವಿಷಯಮಂಡನೆ ಮಾಡಲಿದ್ದಾರೆ.

ಜ. 31ರಂದು ಸಂಜೆ 6ಕ್ಕೆ ಕೃಷಿಕರ ಚಿಂತನಾ ಗೋಷ್ಠಿ ಇದೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಜಿ.ಕರುಣಾಕರ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಫೆ.1ರಂದು ಸಾಹಿತ್ಯ ಗೋಷ್ಠಿ ಇದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪಾಲ್ಗೊಳ್ಳಲಿದ್ದಾರೆ. ಸಾಹಿತಿ ಡಾ.ದೊಡ್ಡರಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆ.2ರಂದು ಯುವ ಚಿಂತನ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವರಾದ ವಿ.ಸುನೀಲ್‌ಕುಮಾರ್, ಆನಂದ್‌ ಸಿಂಗ್‌, ಬಿ.ಸಿ.ನಾಗೇಶ್‌ ಪಾಲ್ಗೊಳ್ಳಲಿದ್ದಾರೆ. ಫೆ.3ರಂದು ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಸಂಸದ ದೇವೇಂದ್ರಪ್ಪ ಪಾಲ್ಗೊಳ್ಳಲಿದ್ದಾರೆ.

ಫೆ.4ರಂದು ತೋಂಟದ ಸಿದ್ದರಾಮ ಸ್ವಾಮೀಜಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾಗವಹಿಸಲಿದ್ದಾರೆ. ಫೆ.5ರಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸದ್ಧರ್ಮ ಸಿಂಹಾಸನಾರೋಹಣ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಮುರುಗೇಶ ನಿರಾಣಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಪಾಲ್ಗೊಳ್ಳಲಿದ್ದಾರೆ. ಡಾ.ಗುರುರಾಜ ಕರಜಗಿ ಉಪನ್ಯಾಸ ನೀಡಲಿದ್ದಾರೆ.

ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಜಗದ್ಗುರುಗಳು ಸಿರಿಗೆರೆಯಿಂದ ಕೊಟ್ಟೂರಿಗೆ ಈ ಮಾರ್ಗ ಮೂಲಕ ಸಂಚರಿಸಲಿದ್ದಾರೆ. ದಾವಣಗೆರೆ ಶಿವಸೈನ್ಯದಿಂದ ಬೃಹತ್ ಕಾರು, ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿ ಸ್ವಾಗತ ನೀಡುವ ಸಂಬಂಧ ಜ.28ರಂದು ದಾವಣಗೆರೆಯಿಂದ ಕೊಟ್ಟೂರುವರೆಗೆ 4 ಸಾವಿರ ಬೈಕ್ ಹಾಗೂ 500 ಕಾರುಗಳ ರ‍್ಯಾಲಿ ನಡೆಯಲಿದೆ.

  • ಶ್ರೀಗಳು ಸಾಗುವ ಮಾರ್ಗ
  • 1) ಸಿರಿಗೆರೆ ಐಕ್ಯಮಂಟಪ (ಬೆಳಿಗ್ಗೆ 10.30)
  • 2) ಓಬವ್ವನಾಗತಿಹಳ್ಳಿ
  • 3) ಸಿರಿಗೆರೆ ಕ್ರಾಸ್ (ಬೆಳಿಗ್ಗೆ 11.45)
  • 4) ಗೌರಮ್ಮನಹಳ್ಳಿ ಕ್ರಾಸ್
  • 5) ಕಲ್ಕುಂಟೆ ಕ್ರಾಸ್
  • 6) ವಿಜಾಪುರ ಗೊಲ್ಲರಹಟ್ಟಿ
  • 7) ವಿಜಾಪುರ
  • 8) ಲಕ್ಷ್ಮೀಸಾಗರ
  • 9) ಬೀರಾವರ ಕ್ರಾಸ್
  • 10) ಸಿದ್ಧವ್ವನದುರ್ಗ (ಕೋಟೆ)
  • 11) ಹೊಸಹಟ್ಟಿ
  • 12) ಮುದ್ದಾಪುರ
  • 13) ಯಳಗೋಡು ಕ್ರಾಸ್
  • 14) ಹುಲ್ಲೇಹಾಳ್ – ಬಸ್ತಿಹಳ್ಳಿ
  • 15) ಬಿದರಕೆರೆ (ಮಧ್ಯಾಹ್ನ 1.00)
  • 16) ರಸ್ತೆಮಾಕುಂಟೆ
  • 17) ಬಿಸ್ತುವಳ್ಳಿ
  • 18) ಜಗಳೂರು (ಮಧ್ಯಾಹ್ನ 1.30)
  • (ದಿದ್ದಿಗಿ ಗ್ರಾಮಸ್ಥರಿಂದ ಜಗಳೂರಿನ ತರಳಬಾಳು ಕೇಂದ್ರದಲ್ಲಿ ದಾಸೋಹ)
  • 19) ಕೆಳಗೋಟೆ ಕ್ರಾಸ್
  • 20) ಕೆಚ್ಚೇನಹಳ್ಳಿ (ಮಧ್ಯಾಹ್ನ 2.45)
  • 21) ಹೊಸಕೆರೆ
  • 22) ಲಕ್ಕಂಪುರ
  • 23) ಸೊಕ್ಕೆ ಕ್ರಾಸ್
  • 24) ಗಡಿಮಾಕುಂಟೆ
  • 25) ಬೆನಕನಹಳ್ಳಿ
  • 26) ಉಜ್ಜಿನಿ
  • 27) ಕಾಳಾಪುರ ಕ್ರಾಸ್ (ಮಧ್ಯಾಹ್ನ 3.30)
  • 28) ನಡುಮಾವಿನಹಳ್ಳಿ ಕ್ರಾಸ್
  • 29) ಹಾರಕನಾಳ್ ಕ್ರಾಸ್
  • 30) ಜಾಗಟಗೆರೆ ಕ್ರಾಸ್
  • 31) ಹುಣಿಸೆಕಟ್ಟೆ ಕ್ರಾಸ್
  • 32) ವಡ್ಢೇರಹಳ್ಳಿ ಕ್ರಾಸ್
  • 33) ಕೊಟ್ಟೂರು (ಸಂಜೆ 4.30)
  • (ಕೊಟ್ಟೂರಿನ ತರಳಬಾಳು ಹುಣ್ಣಿಮೆ ಮಂಟಪದ ಮುಂಭಾಗ – ಉಜ್ಜಿನಿ ಸರ್ಕಲ್ – ಜೋಳದ ಕೂಡ್ಲಿಗಿ ರಸ್ತೆ – ಶ್ರೀ ಜಗದ್ಗುರುಗಳವರ ಬಿಡಾರ.)

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top