ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 114 ಪೌರ ಕಾರ್ಮಿಕ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆಫ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಒಟ್ಟು 114 ಹುದ್ದೆಗಳು ಖಾಲಿ ಇದ್ದು, ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹತೆ: ಕನ್ನಡ ಮಾತನಾಡಲು ಬರಬೇಕು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಗರಿಷ್ಠ ವಯೋಮಿತಿ 55 ವರ್ಷಗಳಾಗಿದೆ.
ವೇತನ: ಪ್ರತಿ ತಿಂಗಳು 17,000 ರಿಂದ 28,950 ರೂಪಾಯಿಗಳಾಗಿವೆ. ಹುದ್ದೆಗಳ ವರ್ಗೀಕರಣ: ಪ.ಜಾತಿ 19, ಪ.ಪಂ 08, ಪ್ರ-1-05, ಪ್ರ 2ಎ-17, ಪ್ರ 2ಬಿ-05, ಪ್ರ ಎ-04ಪ್ರ 3ಬಿ -05, ಸಾಮಾನ್ಯ 51 ಸೇರಿ ಒಟ್ಟು 114 ಹುದ್ದೆ ಭರ್ತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ಆರಂಭದ ದಿನಾಂಕ 13-01-2023, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14-02-2023, ಅರ್ಜಿ ಸಲ್ಲಿಸುವ ಸ್ಥಳ: ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣ ಎದುರು , ಪಿಬಿ ರಸ್ತೆ ದಾವಣಗೆರೆ. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ www.davanagerecity.mrc.gov.in ಭೇಟಿ ನೀಡಿ. ಕೇಂದ್ರ ಕಚೇರಿ ಸೂಚನಾ ಫಲಕದಲ್ಲಿಯೂ ಅಧಿಸೂಚನೆ ವೀಕ್ಷಿಸಬಹುದಾಗಿದೆ.



