ದಾವಣಗೆರೆ: ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿದೆ. ಬ್ಯಾಗ್ ನಲ್ಲಿದ್ದ 80 ಸಾವಿರ ಮೌಲ್ಯದ ಚಿನ್ನ, ನಗದು, ಕಾರಿನ ಕೀ ಕಳ್ಳತನವಾಗಿದೆ. ದಾವಣಗೆರೆ ಜಿಲ್ಲಾಸ್ಪತ್ರೆಯ ನರ್ಸ್ ಸತ್ಯಭಾಮ ಅವರ ಬ್ಯಾಗ್ ಕಳ್ಳತನವಾಗಿದೆ.
ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸತ್ಯಭಾಮ ಅವರು ನೈಟ್ ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತುದ್ದರು. ಕರ್ತವ್ಯದ ಸಮಯದಲ್ಲಿ ಚಿನ್ನಾಭರಣ ವ್ಯಾನಿಟಿ ಬ್ಯಾಗ್ ನ್ನು ರೂಮ್ ನಂಬರ್ 55ರಲ್ಲಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಲ ಹೊತ್ತಿನ ಬಳಿಕ ರೂಮ್‌ಗೆ ಬಂದಾಗ ವ್ಯಾನಿಟಿ ಬ್ಯಾಗ್ ನಾಪತ್ತೆ ಆಗಿತ್ತು.ಬ್ಯಾಗ್ನಲ್ಲಿ 80 ಸಾವಿರ ರೂ ಮೌಲ್ಯದ 30 ಗ್ರಾಂ ತೂಕದ ಚಿನ್ನದ ಬಳೆಗಳು ಹಾಗೂ ನಗದು ಹಾಗೂ ಮನೆಯ ಹಾಗೂ ಕಾರಿನ ಕೀಯನ್ನು ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದಾರೆ.ತಕ್ಷಣವೇ ಆಸ್ಪತ್ರೆಯ ಎಲ್ಲ ಕಡೆ ಹುಡುಕಾಟ ನಡೆಸಲಾಗಿದೆ. ಗೇಟ್ ಬಳಿ ಇದ್ದ ಭದ್ರತಾ ಸಿಬ್ಬಂದಿಯನ್ನ ವಿಚಾರಿಸಿದರೂ ಕೂಡ ಬ್ಯಾಗ್ ಪತ್ತೆಯಾಗಿಲ್ಲ. ಈ ಬಗ್ಗೆ ಬ್ಯಾಗ್ ಕಳ್ಳವಾಗಿದೆ ಎಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.



