ದಾವಣಗೆರೆ: ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ಆರ್ಟಿಐ ಕಾರ್ಯಕರ್ತ ಜಿ.ಪಿ.ರಾಮಕೃಷ್ಣ ಕೊಲೆ ಪ್ರಕರಣದ ಮೊದಲ ಆರೋಪಿ ಪಿಡಿಒ ಎ.ಟಿ. ನಾಗರಾಜ್ ಕೋರ್ಟ್ ಗೆ ಹಾಜರಾಗಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಪಿಡಿಒ ಎ.ಟಿ.ನಾಗರಾಜ್ ತಲೆಮರೆಸಿಕೊಂಡಿದ್ದರು. ಇದೀಗ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ನಲ್ಲಿ ಶರಣಾಗಿದ್ದಾನೆ. ನ್ಯಾಯಾಲಯ ಆರೋಪಿ ನಾಗರಾಜ ನನ್ನು ಪೊಲೀಸರ ವಶಕ್ಕೆ ನೀಡಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಬಳಿಯ ಡಾಬಾದಲ್ಲಿ ಜ.7ರಂದು ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ(30) ಎಂಬಾತನನ್ನು ಹಳೇ ದ್ವೇಷದ ಹಿನ್ನೆಲೆ ಗ್ಯಾಂಗ್ಯೊಂದು ಕಬ್ಬಿಣದ ರಾಡ್ನಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆ ಮಾಡಿತ್ತು. ಕೊಲೆ ಆರೋಪಿಗಳಲ್ಲಿ ಓರ್ವ ವ್ಯಕ್ತ ಪಿಡಿಓ ಸಂಬಂಧಿಯಾಗಿದ್ದನು. ಇದೇ ಕಾರಣಕ್ಕೆ ಪಿಡಿಓ ಎ.ಟಿ.ನಾಗರಾಜ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದರು.
ಇನ್ನು ಕೊಲೆಯಾದ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ ಒಬ್ಬ ಆರ್ಟಿಐ ಕಾರ್ಯಕರ್ತನಾಗಿದ್ದು, ಭ್ರಷ್ಟರು ಆತನನ್ನ ಕಂಡರೆ ಸಾಕು ಬೇವರುತ್ತಿದ್ದರು. ಕಾರಣ ಕೈಯಲ್ಲಿ ಖಚಿತ ಮಾಹಿತಿ ಪಡೆದು ಭ್ರಷ್ಟರನ್ನ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದನು. ಅದೇ ಹಳೇ ದ್ವೇಷದ ಹಿನ್ನೆಲೆ ಡಾಬಾದಲ್ಲಿ ಊಟಮಾಡಲು ಬಂದ ರಾಮಕೃಷ್ಣನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ 24 ವರ್ಷದ ಅರ್ಜುನ್ ಹಾಗೂ ಪ್ರಶಾಂತ ಎಂಬ ಇಬ್ಬರನ್ನ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನ ಬಂಧಿಸುವ ತನಕ ನಾವು ಶವ ಸಂಸ್ಕಾರ ಮಾಡುವುದಿಲ್ಲವೆಂದು ಸಂಬಂಧಿಕರು ಹಟಕ್ಕೆ ಬಿದ್ದಿದ್ದರು.



