ದಾವಣಗೆರೆ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕ ಪದವಿಗಳಿಗೆ 2003-04 ರಲ್ಲಿ ಹಾಗೂ ಆ ನಂತರ ಪ್ರವೇಶ ಪಡೆದ ಸೆಮಿಸ್ಟರ್ ಸ್ಕೀಂನಲ್ಲಿ ಅಧ್ಯಯನ ಮಾಡಿ. ಕೋರ್ಸ್ ಪೂರ್ಣಗೊಳಿಸಲು ನಿಗದಿಪಡಿಸಲಾಗಿದ್ದ ಅವಧಿ (Double the duration) ಮುಗಿದರೂ ಸಹ ಈವರೆಗೂ ಪದವಿ ಪೂರ್ಣ ಗೊಳಿಸಲಾಗದೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊನೆಯ ಅವಕಾಶವನ್ನು ನೀಡಲಾಗಿದೆ.
ಸದರಿ ಅವಧಿಯಲ್ಲಿ ಕೋರ್ಸ್‍ಗಳನ್ನು ಪೂರ್ಣಗೊಳಿಸಲಾಗದ ಇಂತಹ ವಿದ್ಯಾರ್ಥಿಗಳಿಗೆ ಏಪ್ರಿಲ್/ಮೇ-2023ರ ಮಾಹೆಯಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದೆ ಪರೀಕ್ಷಾ ಶುಲ್ಕ ಹಾಗೂ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



