ದಾವಣಗೆರೆ: ಸರ್ಕಾರಿ ಗೋಮಾಳ ಜಮೀನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆಂದು ಆರೋಪಿಸಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ರೈತರು ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಕುರಿ ನುಗ್ಗಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡುತ್ತಿದ್ದ ವೇಳೆ ಸ್ಥಳೀಯರು ಕುರಿ ನುಗ್ಗಿಸಿ ಪ್ರತಿಭಟಿಸಿದರು. ನಮ್ಮ ಊರಲ್ಲಿನ ಧನ ಕರು, ಕುರಿ ಮೇಯಿಸಲು ಇದ್ದ ಗೋಮಾಳ ಜಮೀನನ್ನು ಬಿಜೆಪಿ ಕಾರ್ಯಕರ್ತರಿಗೆ ಕೃಷಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರ. ಈ ವೇಳೆ ಪ್ರತಿಭಟನಕಾರರು ಹಾಗೂ ಶಾಸಕರ ನಡುವೆ ವಾಕ್ಸಮರ ನಡೆಯಿತು. ಪ್ರತಿಭಟನಕಾರರನ್ನು ಸಮಾಧಾನ ಮಾಡಲು ಶಾಸಕ ರೇಣುಕಾಚಾರ್ಯ ಐರಾಣದರು.



