ದಾವಣಗೆರೆ: ಜೈಪುರ ಶ್ರೀಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿ ಹಾಗೂ ಬೆಂಗಳೂರು ರೋಟರಿ ವತಿಯಿಂದ ಜನವರಿ 03 ರಿಂದ 09 ರವರೆಗೆ ಬೆಂಗಳೂರಿನಲ್ಲಿ ಕೃತಕ ಕಾಲು ಹಾಗೂ ಮುಂಗೈ ಬೃಹತ್ ಶಿಬಿರ ಆಯೋಜಿಸಲಾಗಿರುತ್ತದೆ.
ಮುಂಗೈ/ಕೃತಕ ಕಾಲುಗಳು, ಪೋಲೀಯೋ ಪೀಡಿತರಿಗಾಗಿ ಕ್ಯಾಲಿಪರ್ಸ್‍ಗಳನ್ನು ಉಚಿತವಾಗಿ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ಸಹ ಶಿಬಿರದಲ್ಲಿ ನೀಡಲಾಗುವುದು. ಅವಶ್ಯವಿರುವ ವಿಕಲಚೇತನರು ಕಡ್ಡಾಯವಾಗಿ ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯೊಂದಿಗೆ ಗಣೇಶ ಬಾಗ್, ಶ್ರೀ ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್ (ರಿ.), ನಂ.9, ಭಗವಾನ್ ಮಹಾವೀರ್ ರಸ್ತೆ(ಇನ್‍ಫೆಂಟ್ರಿ ರಸ್ತೆ), ಶಿವಾಜಿನಗರ, ಬೆಂಗಳೂರು-1, (ಶಿವಾಜಿನಗರ ಬಸ್ ನಿಲ್ದಾಣದ ಹತ್ತಿರ) ಈ ವಿಳಾಸದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಗಿರೀಶ್ – 9880112800, ಮಧುಸೂದನ್ – 9731525183 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಕೆ.ಕೆ.ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



