ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸಲು ನಾನು ಪ್ರಮಾಣಿಕ ನಿದ್ದೇನೆ. 2 ಲಕ್ಷ ರೂಪಾಯಿ ಕಟ್ಟಿ ಏಕೆ ಅರ್ಜಿ ಹಾಕಬೇಕು ಎಂದು ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದರು. ಮಲ್ಲಿಕಾರ್ಜುನ್ ಏಕೆ ರಾತ್ರೋರಾತ್ರಿ ಎರಡು ಲಕ್ಷ ರೂಪಾಯಿ ಕಟ್ಟಿ ಅರ್ಜಿ ಹಾಕಿದ್ದಾರೆ. ಈಗ ಅವರ ಪ್ರಾಮಾಣಿಕತೆ ಎಲ್ಲಿ ಹೋಯಿತು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು ಯಶವಂತರಾವ್ ಜಾದವ್ ಪ್ರಶ್ನಿಸಿದ್ದಾರೆ.
2 ಲಕ್ಷ ಹಣ ಕಟ್ಟುವ ಮೂಲಕ ಈಗ ಅವರ ಅಪ್ರಮಾಣಿಕರು ಎಂದು ಒಪ್ಪಿಕೊಂಡಂತಾಯಿತು. ನಾನು ಪ್ರಾಮಾಣಿಕ ಆಕಾಶದಿಂದ ನೇರವಾಗಿ ಭೂಮಿಗೆ ಬಂದಿದ್ದೇನೆ ಎಂಬ ಅಹಂಕಾರದಿಂದ ಈ ರೀತಿ ನಡೆದುಕೊಂಡರೆ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಎಷ್ಟೇ ಶ್ರೀಮಂತನಿರಲಿ ಪಕ್ಷದ ಚೌಕಟ್ಟಿಗೆ ತಲೆಬಾಗಲೇ ಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಅವರ ಪಕ್ಷದ ರಾಜ್ಯ ಅಧ್ಯಕ್ಷರು, ಎಸ್ಎಸ್ ಮಲ್ಲಿಕಾರ್ಜುನಿಗೆ ಮುಖಕ್ಕೆ ಮಂಗಳಾರತಿ ಮಾಡಿ, ನೀನು ಹೇಗೆ ಟಿಕೆಟ್ ಪಡೆದುಕೊಳ್ಳುತ್ತಿ ನೋಡುತ್ತೇನೆ ಎಂದು ಹೇಳಿದ ತಕ್ಷಣ ಹೋಗಿ ಅರ್ಜಿ ಹಾಕಿದ್ದಾರೆ. ಇದೀಗ ಮಲ್ಲಿಕಾರ್ಜುನ್ ಪ್ರಾಮಾಣಿಕತೆ, ನಿಷ್ಠೆ ಎಲ್ಲ ಮಣ್ಣು ಪಾಲಾಗಿ ಹೋಯಿತು ಎಂದಿದ್ದಾರೆ.



