ದಾವಣಗೆರೆ: ಜನನ-ಮರಣ ಆನ್‍ಲೈನ್ ನೋಂದಣಿ, ಕುಂದುಕೊರತೆ ಹಾಗೂ ತಾಂತ್ರಿಕ ತೊಂದರೆಗಳನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತಾನಾಡಿ ಅವರು, ಜನನ- ಮರಣದ ದಾಖಲಾತಿಗಳನ್ನು ಎಲ್ಲಾ ತಾಲ್ಲೂಕಿನ ವೈದ್ಯಾಧಿಕಾರಿಗಳು, ವಿಷಯ ನಿರ್ವಾಹಕರಿಗೆ, ತಹಶೀಲ್ದಾರರಿಗೆ, ನಾಡ ಕಚೇರಿಯಿಂದ ನಗರ ಸ್ಥಳೀಯ ಸಂಸ್ಥೆಗಳನ್ನು ಇ-ಜನ್ಮ (ಏಕರೂಪ ತಂತ್ರಾಂಶ)ದಲ್ಲಿ ಅಳವಳಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಯೂಸರ್ ಐಡಿಯನ್ನು ಸಹ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಯ ಜನನ ಮರಣ ತಾಲ್ಲೂಕುವಾರು ನೋಂದಣಿಯಾದ ವಿವರ ಹಾಗೂ ಎಲ್ಲಾ ತಾಲ್ಲೂಕು ಕಚೇರಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿ, ಉಪತಹಶೀಲ್ದಾರು ಸಹ ತಪಾಸಣೆ ವರದಿ ಮತ್ತು ವೈದ್ಯಾಧಿಕಾರಿಗಳು ತಪಾಸಣೆ ವರದಿ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ ಮಾತಾನಾಡಿ, ಜನನ ಮತ್ತು ಮರಣ ನೋಂದಣಿಯ ದಾಖಲೆಗಳನ್ನು ಪ್ರತಿ ವರ್ಷ ಗ್ರಾಮ ಲೆಕ್ಕಿಗರಿಂದ ಪಡೆದು ಸಂರಕ್ಷಣೆಗಾಗಿ ಅಭಿಲೇಖಾಲಯದಲ್ಲಿ ಜಮಾ ಮಾಡಲು ಹಾಗೂ ನಿರ್ವಹಣೆಗಾಗಿ ಜನನ ಮತ್ತು ಮರಣ ಕಾಯ್ದೆ ಪ್ರಕಾರ ಸಂಬಂದಪಟ್ಟ ತಹಶೀಲ್ದಾರರು,ಟಿಎಂಸಿ ಹಾಗೂ ಸಿಎಂಸಿ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದರು.
ಕಾನೂನಾತ್ಮಕವಾಗಿ ಜನನ-ಮರಣ ನೋಂದಣಿ ಕಾಯ್ದೆ 1969ಕ್ಕೆ ಒಳಪಟ್ಟಿರುತ್ತದೆ. ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಿಗರು ಜನನ ಮರಣ ನೋಂದಣಿ ಅಧಿಕಾರಿಗಳು ಮನೆಯಲ್ಲಾದ ಜನನ ಮರಣ ನೋಂದಣಿ ಮಾಡುವಾಗ ತಪ್ಪದೇ ತಂದೆ ತಾಯಿಯ ಇಬ್ಬರ ಯಾವುದಾದರೂ ದಾಖಲೆಗಳನ್ನು ತಪ್ಪದೇ ಸಂಗ್ರಹಿಸಿ ಜನನ ಮರಣ ನೋಂದಣಿ ಮಾಡಬೇಕು ಎಂದರು.
ಸಭೆಯಲ್ಲಿ ಡಿಹೆಚ್‍ಓ ನಾಗರಾಜ, ತಾಲ್ಲೂಕು ಮಟ್ಟದ ಉಪ ನೋಂದಣಾಧಿಕಾರಿಗಳು, ಇತರರಿದ್ದರು.



