ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಬಂದಿದ್ದ ಮಹಿಳೆಯೊಬ್ಬರ 3.70 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ರೇಖಾ ವೀರೇಶ್ ಅವರ 25 ಗ್ರಾಂ ನೆಕ್ಲೆಸ್ , 10 ಗ್ರಾಂ ಜುಮುಕಿ, 8 ಗ್ರಾಂ ಹ್ಯಾಂಗಿಗ್ಸ್ , 6 ಗ್ರಾಂ ಕಿವಿಯೋಲೆ, 8 ಗ್ರಾಂ ಉಂಗುರ, 12 ಗ್ರಾಂ ಚಿನ್ನದ ಸರ ಸೇರಿ ಒಟ್ಟು ಒಟ್ಟು 3.70. ಲಕ್ಷದ ಚಿನ್ನವನ್ನು ಬ್ಯಾಗ್ ನಲ್ಲಿ ಇಟ್ಟಿದ್ದರು. ಚಿನ್ನಾಭರಣ ಇಟ್ಟಿದ್ದ ಬ್ಯಾಗ ಕಳ್ಳತನವಾಗಿದೆ. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



