ದಾವಣಗೆರೆ: ಸರ್ಕಾರಿ ಶಾಲೆಯ 4.20 ಎಕರೆ ಭೂಮಿಯನ್ನು ಗ್ರಾಮದ 14 ಮಂದಿ ಪ್ರಭಾವಿಗಳು ಒತ್ತುವರಿ ಮಾಡಿದ್ದರು. ಈ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದರು. ವಿಷಯ ತಿಳಿದು ಫೀಲ್ಡ್ ಗಿಳಿದ ತಹಶೀಲ್ದಾರ್ ಪೊಲೀಸ್ ಬಿಗಿ ಭದ್ರತೆಯಲ್ಲಿ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ಮಾಡಿ ಒತ್ತುವರಿ ಮಾಡಿದ ಸರ್ಕಾರಿ ಭೂಮಿ ವಶಪಡಿಸಿಕೊಂಡರು.
ಈ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಉಜ್ಜಪ್ಪ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಎಕರೆ 20 ಗುಂಟೆ ಜಮೀನು ಇದೆ. ಅದನ್ನು ಗ್ರಾಮದ 14 ಜನ ಕಬಳಿಸಿಕೊಂಡಿದ್ದರು. ಈ ವಿಚಾರ ಗ್ರಾಮಸ್ಥರಿಗೆ ತಿಳಿದಿತ್ತು.ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಒತ್ತುವರಿಯಾಗಿತ್ತು. 14 ಜನರು ಮೂರು ದಶಕಗಳ ಹಿಂದೆಯೇ ಕಬಳಿಸಿದ್ದರು. ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಬಿಲ್ಡಿಂಗ್ ಸಹ ಕಟ್ಟಿದ್ದರು. ಶಾಲಾ ಮಕ್ಕಳು ಆಟವಾಡುವ ಸ್ಥಳದಲ್ಲಿ ತಂತಿ ಬೇಲಿ ಹಾಕಿದ್ದರು.ನಾಲ್ಕು ದಶಗಳ ಹಿಂದೆ ಗ್ರಾಮದ ಪ್ರಮುಖರೊಬ್ಬರು ಈ ಜಮೀನು ಶಾಲೆಗಾಗಿ ದಾನ ನೀಡಿದ್ದರು.ಈ 14 ಜನರು ಸರ್ಕಾರಕ್ಕೆ ದಾನ ನೀಡಿದ್ದ ಭೂಮಿಯನ್ನ ಕಬಳಿಸಿದ್ದರು.
ಜಗಳೂರು ತಹಶೀಲ್ದಾರ್ ಸಂತೋಷ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಮಾಡಿದರು. ಇದರಿಂದ ಗ್ರಾಮದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ತಹಶೀಲ್ದಾರ್ ಅವರು ತಾವು ತೆಗೆದುಕೊಂಡು ದಿಟ್ಟ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. ಶಾಲೆಗೆ ಹೊಂದಿಕೊಂಡಿದ್ದ ಕೆಲ ಕಟ್ಟಡಗಳನ್ನ ಕೆಡವಿ ಹಾಕಿದರು. ನಾಲ್ಕು ಜೆಸಿಬಿಗಳಳಿಂದ ಸ್ವಚ್ಚ ಮಾಡಿ ಕಟ್ಟಡಗಳನ್ನು ತೆರವುಗೊಳಿಸಿದರು. ಇಓ ಚಂದ್ರಶೇಖರ , ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾಅರಿಗಳು ಇದ್ದರು.



