ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಮೊಸಳೆ ಮರಿ ಕಂಡು ಬಂದಿದ್ದು, ಇಲ್ಲಿನ ಜನರು ಆತಂಕಗೊಂಡಿದ್ದಾರೆ.
ಹರಿಹರ ನಗರದ ಎಪಿಎಂಸಿಯ ಹಿಂಭಾಗದ ಗಂಗಾನಗರ ವಾರ್ಡ್ ಬಳಿಯ ಭತ್ತದ ಗದ್ದೆಯಲ್ಲಿ ದಾದಾಪೀರ್ ದನಕರುಗಳಿಗೆ ಹುಲ್ಲು ತರಲು ಹೋಗಿದ್ದರು. ಈ ವೇಳೆ ಗಂಗಾನಗರದ ಹಳ್ಳದ ಬಳಿ ಮೊಸಳೆ ಮರಿ ಕಂಡಿದೆ. ಇದನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತಂದಿದ್ದು, ಗಂಗಾನಗರದ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಅತ್ಯಂತ ಅಪಾಯಕಾರಿಯಾದ ಮೊಸಳೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇಲ್ಲಿ ಮೊಸಳೆ ಮರಿ ಸಿಕ್ಕಿರುವ ಹಿನ್ನೆಲೆಒಸಳೆಯೂ ಸಹ ಇರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಪತ್ತೆ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.