ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮನೆ, ಕುರಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕುಖ್ಯಾತ ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 9,84 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದಿನಾಂಕ:18-11-2022 ರಂದು ಬೆಳಗಿನ ಜಾವ ಸಮಯದಲ್ಲಿ ಬಿಳಿಚೋಡು ಜನತಾ ಕಾಲೋನಿ ಹತ್ತಿರ ಆಸಗೋಡು ಕ್ರಾಸ್ ಬಳಿ ಕಾರಿನಲ್ಲಿ ಬಂದು ಕಳ್ಳತನ ಮಾಡಲು ತೊಡಗಿದ ಐದು ಜನ ವ್ಯಕ್ತಿಗಳನ್ನು ಬಿಳಿಚೋಡು ಪೊಲೀಸರು ಮತ್ತು ಗ್ರಾಮಾಂತರ ಉಪ-ವಿಭಾಗದ ಅಪರಾಧ ವಿಭಾಗದ ತಂಡವು ಈ ಕೆಳಕಂಡ ಆರೋಪಿತರನ್ನು ಬಂಧಿಸುವಲ್ಲಿ ಯಾಶ್ವಸಿಯಾಗಿದ್ದಾರೆ. ಈ ಆರೋಪಿಗಳು ದಾವಣಗೆರೆ ಜಿಲ್ಲೆಯ ಬಿಳಿಚೋಡು ಠಾಣೆಯ 02 ಪ್ರಕರಣಗಳು, ಜಗಳೂರು ಪೊಲೀಸ್ ಠಾಣೆಯ 01 ಪ್ರಕರಣದಲ್ಲಿ, ಮಾಯಕೊಂಡ ಠಾಣೆಯ 04 ಪ್ರಕರಣಗಳಲ್ಲಿ, ದಾವಣಗೆರೆ ಗ್ರಾಮಾಂತರ ಠಾಣೆಯ 01 ಪ್ರಕರಣದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ 01 ಪ್ರಕರಣದಲ್ಲಿ, ಸಂತೇಬೆನ್ನೂರು ಪೊಲೀಸ್ ಠಾಣೆಯ 01 ಪ್ರಕರಣದಲ್ಲಿ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸ್ ಠಾಣೆಯ 01 ಪ್ರಕರಣದಲ್ಲಿ, ಒಟ್ಟು 12 ಕಡೆಗಳಲ್ಲಿ ಬಂಗಾರ, ಬೆಳ್ಳಿಯ ಸಾಮಾನುಗಳನ್ನು, ನಗದು ಹಣ ಹಾಗೂ ಕುರಿಗಳನ್ನು ಕಳ್ಳತನ ಮಾಡಿರುತ್ತಾರೆ. ಇದಲ್ಲದೇ ಸದರಿ ಆರೋಪಿತರು ಈ ಹಿಂದೆ ಹಲವಾರು ಕಡೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದಾರೆ.
ಬಂಧಿತ ಆರೋಪಿಗಳಿಂದ 1] ಸುಮಾರು 106 ಗ್ರಾಂ ಬಂಗಾರದ ಆಭರಣಗಳನ್ನು, (ರೂ 5,35,000/- ಬೆಲೆಬಾಳುವ), 2] 818 ಗ್ರಾಂ ಬೆಳ್ಳಿಯ ಸಾಮಾನುಗಳನ್ನು (ರೂ 53500/- ಬೆಲೆ ಬಾಳುವ), 3] ಕೃತ್ಯಕ್ಕೆ ಉಪಯೋಗಿಸಿದ ಕೆಎ-13/ಬಿ-8831ನೆ ಮಹಿಂದ್ರ ವೆರಿಟೋ ಕಾರು, (ರೂ 4,00,000/-ಬೆಲೆಬಾಳುವ) 4] ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮೊಬೈಲ್ ಪೋನ್‌ಗಳು (ಬೆಲೆ ಸುಮಾರು ರೂ 1200 /-) , ಒಟ್ಟು ಎಲ್ಲಾ ಸೇರಿ ಅಂದಾಜು ಬೆಲೆ ರೂ 9,84,700/-ಗಳಾಗುತ್ತದೆ ಹಾಗೂ ಒಂದು ಕೆಂಪು ಬಣ್ಣದ ಒಂದು ಬ್ರೌನ್ ಕಲರಿನ ಎರಡು ಮಂಕಿ ಕ್ಯಾಪ್‌ಗಳು, ನಾಲ್ಕು ಸ್ಕೂಡ್ರೈವರ್, ಒಂದು ಚಿಕ್ಕ ಕಟರ್, ಒಂದೂವರೆ ಅಡಿ ಉದ್ದ ಕಬ್ಬಿಣದ ರಾಡು, ಎರಡು ಜೊತೆ ಕಪ್ಪು ಬಣ್ಣದ ಹ್ಯಾಂಡ್‌ಗ್ಲೋಸ್, ಒಂದು ಚಿಕ್ಕ ಕಪ್ಪು ಬಣ್ಣ ಬ್ಯಾಟರಿ ಇವುಗಳನ್ನು ಅಮಾನತ್ತು ಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು 1] ರಂಗನಾಥ @ ಬುರುಡೇಕಟ್ಟೆ ರಂಗ, ಸು:43 ವರ್ಷ, ಕೂಲಿ ಕೆಲಸ, ಸ್ವಂತ ವಾಸ:ಬುರುಡೇಕಟ್ಟೆ ಗ್ರಾಮ, ಹಾಲಿ ವಾಸ:ಗಂಜಿಗೇರೆ ಗ್ರಾಮ ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. 2] ಲೋಕೇಶ, ಸು: 50 ವರ್ಷ, ಕೂಲಿ ಕೆಲಸ, ವಾಸ: ಗಂಜಿಗೇರ ಗ್ರಾಮ ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. 3] ತಿಮ್ಮ @ ಹ್ಯಾಡ್ ತಿಮ್ಮ, ಸು: 55 ವರ್ಷ, ಕುರಿ ವ್ಯಾಪಾರ ಕೆಲಸ, ವಾಸ:ಗಂಜೀಗೆರೆ ಗ್ರಾಮ, ಹೊಸದುರ್ಗ ತಾಲ್ಲೂಕು. 4] ವಿಜಿ @ ವಿಜಯ್, ಸುಮಾರು 31 ವರ್ಷ, ಕಾರ ಚಾಲಕ, ವಾಸ: ಈಚಲನಾಗೇನಹಳ್ಳಿ ಗ್ರಾಮ ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಎಂದು ಗುರುತಿಸಲಾಗಿದೆ.
ಎಸ್ ಪಿ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ಬಿಳಿಚೋಡು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಣ್ಣ, ಬಿಳಿಚೋಡು ಪೊಲೀಸ್ ಠಾಣೆಯ ಉಪ-ನಿರೀಕ್ಷಕ .ಕೆ.ಓಂಕಾರಿನಾಯ್ಕ, ದಾವಣಗೆರೆ ಉಪ-ವಿಭಾಗ ಕಚೇರಿಯ ಸಿಬ್ಬಂದಿಗಳಾದ:-.ಕರಿಬಸಪ್ಪ, ಸೈಯದ್ ಗಫಾರ, ನಾಗರಾಜಯ್ಯ, ನೂರುಲ್ಲಾ, ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜಿ.ಟಿ.ವೆಂಕಟೇಶ, ಆರ್.ಎ.ಕೃಷ್ಣಮೂರ್ತಿ, ಹೆಚ್.ಎಸ್.ಸ್ವಾಮಿ, ಬಿ.ಹಚ್.ಸಿದ್ದೇಶ, ನಾಗೇಶನಾಯ್ಕ, ಭೋವಿ ಹನುಮಂತಪ್ಪ, ಮತ್ತು ಜಗಳೂರು ಪೊಲೀಸ್ ಠಾಣೆಯ ಕವಾಡಿ ಹನುಮಂತಪ್ಪ, ರಾಘವೇಂದ್ರ, ಶಾಂತಕುಮಾರ ಇವರುಗಳು ಭಾಗವಹಿಸಿದ್ದು. ಈ ಕಾರ್ಯಚಾರಣೆಗೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನವನ್ನು ಘೋಷಣೆ ಮಾಡಿ ಶ್ಲಾಘಿಸಿರುತ್ತಾರೆ.