ದಾವಣಗೆರೆ: ರಾಷ್ಟ್ರೀಯ ಜಾನುವಾರು ರೋಗನಿಯಂತ್ರಣದಡಿ ಕಾಲು ಬಾಯಿಜ್ವರ ಹಾಗೂ ಕಂದು ರೋಗಕ್ಕೆ ಲಸಿಕಾ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ. ಎನ್‍ಎಡಿಸಿಪಿ ಯಲ್ಲಿ ಈಗಾಗಲೇ 2ನೇ ಸುತ್ತಿನಲ್ಲಿ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಈ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮದಡಿ ಪ್ರತಿ 6 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ಎಮ್ಮೆಗಳು ಸೇರಿದಂತೆ ಹಾಗೂ ಜಾನುವಾರುಗಳು ಸೇರಿದಂತೆ ಲಸಿಕೆ ಹಾಕಲಾಗುತ್ತದೆ. ಪ್ರಸ್ತುತ್ತ ನವಂಬರ್ ತಿಂಗಳಿಂದ ಡಿಸೆಂಬರ್ ರವರೆಗೆ ಮೊದಲನೇ ಸುತ್ತಿನಲ್ಲಿ ಲಸಿಕಾ ಕಾರ್ಯಕ್ರಮವು ಅಕ್ಟೋಬರ್ 2020 ರಿಂದ ಪ್ರಾರಂಭವಾಗಿ ನವಂಬರ್ 2020 ರವರೆಗೆ ನಡೆದಿದ್ದು 269320 ರಾಸುಗಳಿಗೆ ಲಸಿಕೆ ಹಾಕಲಾಗಿತ್ತು. ಎರಡನೇ ಸುತ್ತನಲ್ಲಿ ಡಿಸೆಂಬರ್-2021 ರಿಂದ ಜನವರಿ 2022 ರವರೆಗೆ 274471 ರಾಸುಗಲಿಗೆ ಲಸಿಕೆ ಹಾಕಿದ್ದು 94% ಸಾಧನೆ ಮಾಡಲಾಗಿದೆ.
ಈಗ ಪ್ರಸ್ತತ ನವಂಬರ್ 2022 ರಿಂದ ಡಿಸೆಂಬರ್ 2022 ರವರೆಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 329800 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆದ್ದರಿಂದ ರೈತರು ಸಾರ್ವಜನಿಕರು ಸಹಕರಿಸಬೇಕಾಗಿ ಪಶು ಸಂಗೋಪನೆ ಉಪ ನಿರ್ದೇಶಕರು ತಿಳಿಸಿದರು. ಕಳೆದ ಸುತ್ತಿನ ಲಸಿಕೆ ಶಿಲ್ಕು 29700 ಡೋಸ್ ಲಭ್ಯವಿದ್ದು 300100 ಡೋಸ್ ಲಸಿಕೆ ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಸಿರಿಂಜ್ ಶಿಲ್ಕು 36300 ಇದ್ದು 293500 ಸಿರಿಂಜ್ ಗಳು ಈಗಾಗಲೇ ಸರಬರಾಜಾಗಿದೆ.
6 ತಾಲ್ಲೂಕುಗಳಿಗೂ ಈಗಾಗಲೇ ಜಾನುವಾರ ಗಣತಿ ಆದಾರದ ಮೇಲೆ ಅವಶ್ಯಕ ಲಸಿಕೆ ಮತ್ತು ಸಿರಿಂಜ್ ಗಳನ್ನು ಸರಬರಾಜು ಮಾಡಲಾಗಿದ್ದು, ಲಸಿಕೆಯನ್ನು ವಾಕ್ ಇನ್ ಕಲರ್ ಐಸ್ ಲೈನ್ ರೇಫ್ರಿಜರೆಟರ್ ಮತ್ತು ರೆಫೇಜರೇಟರ್ ಗಳಲ್ಲಿ ದಾಸ್ತಾನೀಕರಿಸಿದೆ.ಲಸಿಕಾ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮಗಳಾದಲ್ಲಿ ಚಿಕಿತ್ಸೆ ಬೀಡಲು ಅವಶ್ಯಕತೆ ತುರ್ತು ಔಷಧಿಗಳ ಸರಬರಾಜಿಗೆ ಕ್ರಮ ಕೈಗೊಳಲಾಗಿದೆ.
ಪಶುವೈದ್ಯಕೀಯ ಸಂಸ್ಥೆವಾರು ಲಸಿಕಾದಾರರನ್ನು ಗುರುತಿಸಿದ್ದು ಎಲ್ಲರಿಗೂ ಯುಸರ್ ಐಡಿ ಗಳನ್ನು ಸೃಜಿಸಿದ್ದು ಗ್ರಾಮಗಳನ್ನು ಮ್ಯಾಪ್ ಮಾಡಲಾಗಿದೆ ಲಸಿಕೆ ಹಾಕಿದ ಎಲ್ಲಾ ಜಾನುವಾರುಗಳ ಇಯರ್ ಟ್ಯಾಗ್ ನಂಬರ್ ಗಳನ್ನು ಐಎನ್‍ಎಪಿಹೆಚ್ ತಂತ್ರಾಶದಲ್ಲಿ ದಾಖಲಿಸಬೇಕಿದೆ ಎಂದರು.



