ಹಾವೇರಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ಮಹಿಳೆ ಹೊಟ್ಟೆಯಲ್ಲಿನ ಬರೋಬ್ಬರಿ 8.5 ಕೆ.ಜಿ ತೂಕದ ದುರ್ಮಾಂಸ ಗಡ್ಡೆ ಪತ್ತೆಯಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಎಸ್.ವೈ.ಹಿರೇಗೌಡ್ರು ಅವರನ್ನೊಳಗೊಂಡ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಗಡ್ಡೆ ಹೊರ ತೆಗೆದಿದ್ದಾರೆ. ಬೇವಿನಹಳ್ಳಿ ಗ್ರಾಮದ ಮಹಿಳೆಗೆ , ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಾವೇರಿಯಲ್ಲಿ ತಪಾಸಣೆ ಮಾಡಿದಾಗ ಬೃಹತ್ ಗಡ್ಡೆ ಇರುವುದು ಪತ್ತೆಯಾಗಿತ್ತು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕಳುಹಿಸಿಕೊಡಲಾಗಿತ್ತು. ಭಯದಿಂದ ಕಿಮ್ಸ್ ಆಸ್ಪತ್ರೆಗೆ ಹೋಗದೇ ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆ ಕೈಗೊಂಡ ವೈದ್ಯಾಧಿಕಾರಿ ಡಾ. ಎಸ್.ವೈ.ಹಿರೇಗೌಡ್ರ ಹಾಗೂ ವೈದ್ಯ ಡಾ.ವೀರೇಶ ಮಠಪತಿ ಹಾಗೂ ಸಿಬ್ಬಂದಿ ಶಸ್ತ್ರ ಚಿಕಿತ್ಸೆ ಮಾಡಿ, ಗಡ್ಡೆ ಹೊರತೆಗೆದಿದ್ದಾರೆ.



