ದಾವಣಗೆರೆ: ಬೆಲೆಬಾಳುವ ಗಂಧದ ಮರ ಕಳ್ಳತನಕ್ಕೆ ಅಡ್ಡಿ ಉಂಟು ಮಾಡಿದ್ದ ನಾಯಿಗಳಿಗೆ ವಿಷ ಹಾಕಿ ಕೊಂದು, ಮರ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿ ಬಿದ್ದ ಕಳ್ಳರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರ ಬೆಳಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರು ಗೌಡ ಎಂಬುವರ ಮನೆ ಮುಂದೆ ಈ ಕೃತ್ಯ ನಡೆದಿದೆ. ಮನೆ ಮುಂದದಿನ ಗಂಧದ ಮರವನ್ನು ಐದಾರು ಜನ ಕಳ್ಳರು ತಡ ರಾತ್ರಿ ಕಡಿಯಲು ಯತ್ನಿಸಿದ್ದರು. ಮನೆಯ ಹೊರಗಿನಿಂದ ಚಿಲಿಕ ಹಾಕಿದ ಕಳ್ಳರು, ಮರ ಕಟ್ ಮಾಡಲು ಶುರು ಮಾಡಿದ್ದರು. ತಮ್ಮ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದ್ದ ಎರಡು ಕಾವಲು ನಾಯಿಗಳಿಗೆ ಕೋಳಿ ಮಾಂಸದಲ್ಲಿ ವಿಷ ಹಾಕಿ ಕೊಂದಿದ್ದಾರೆ.
ಕಟಿಂಗ್ ಮಿಷನ್ನಿಂದ ಬೃಹತ್ ಶ್ರೀಗಂಧದ ಮರವನ್ನು ಸದ್ದಿಲ್ಲದೇ ಕೊಯ್ಯಲು ಆರಂಭಿಸಿದ್ದರು. ಈ ವೇಳೆ ಶಬ್ದ ಕೇಳಿ ಮನೆಯವರಿಗೆ ಎಚ್ಚರವಾಗಿದೆ. ಮನೆಯವರು ಹೊರ ಬರದಂತೆ ಹೊರಗಿನಿಂದ ಬಾಗಿಲು ಲಾಕ್ ಮಾಡಿದ್ದರಿಂದ ಕೂಗಾಡಿ ಪಕ್ಕದ ಮನೆಯವರನ್ನು ಸೇರಿಸಿದ್ದಾರೆ. ಆ ವೇಳೆಗಾಗಲೇ ಊರ ಹೊರಗೆ ಓಡಿ ಹೋಗಿದ್ದಾರೆ. ಅಡಗಿಕೊಂಡಿದ್ದರು. ಬೆಳಿಗ್ಗೆವರೆಗೆ ಹುಡುಕಾಟ ನಡೆದಿದ್ದಾರೆ. ಆರು ಜನರ ಕಳ್ಳರಲ್ಲಿ ಇಬ್ಬರನ್ನು ಹಿಡಿ ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಇಬ್ಬರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.