ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅನೇಕ ವರ್ಷಗಳಿಂದ ನೇರ ಪಾವತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು ಹಾಗೂ ಈ ಹಿಂದೆ ಆರು ತಿಂಗಳು ಕೆಲಸ ಮಾಡಿ ಬಿಟ್ಟಿರುವವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಮ್.ಹನುಮಂತಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಒಂದು ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೇರ ಪಾವತಿ ಪೌರ ಕಾರ್ಮಿಕರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಯುವ ಮುಖಂಡರು ಎಲ್.ಎಚ್ ಸಾಗರ್ ಹಾಗೂ ಸಂಘದ ನಿರ್ದೇಶಕ ರವಿವರ್ಧನ್ , ಮುತ್ತೂರಮ್ಮ, ರೇಣುಕಮ್ಮ ಆವರಗೆರೆ ಮಂಜುನಾಥ , ಪರಶುರಾಮ, ಮಹಾಂತೇಶ್, ರಾಮಚಂದ್ರಪ್ಪ ಉಪಸ್ಥಿತರಿದ್ದರು.