ದಾವಣಗೆರೆ: ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಹರಿಹರ, ಚನ್ನಗಿರಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪಚುನಾವಣೆಯನ್ನು ಮತ್ತು ಪುನರ್ ರಚನೆಗೊಂಡಿರುವ ಗ್ರಾಮ ಪಂಚಾಯಿತಿಗೆ ಸದಸ್ಯ ಸ್ಥಾನಗಳನ್ನು ತುಂಬುಲು ಚುನಾವಣಾ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೊರಡಿಸಿರುತ್ತಾರೆ.
ನ್ಯಾಮತಿ ತಾಲ್ಲೂಕು, ಗುಡ್ಡೇಹಳ್ಳಿ ಗ್ರಾಪಂ, ಕ್ಷೇತ್ರ ಜೀನಹಳ್ಳಿ-1 (ಅನುಸೂಚಿತ ಜಾತಿ), (ಸಾಮಾನ್ಯ(ಮಹಿಳೆ)). ಕ್ಷೇತ್ರ ಜೀನಹಳ್ಳಿ-2 (ಸಾಮಾನ್ಯ), (ಸಾಮಾನ್ಯ (ಮಹಿಳೆ)). ಹರಿಹರ ತಾಲ್ಲೂಕು, ಎಳೆಹೊಳೆ ಗ್ರಾಪಂ, ಕ್ಷೇತ್ರ ಮಳಲಹಳ್ಳಿ (ಅನುಸೂಚಿತ ಪಂಗಡ). ಚನ್ನಗಿರಿ ತಾಲ್ಲೂಕು, ಗ್ರಾಮ ಪಂಚಾಯಿತಿ -ಹಿರೇಮಳಲಿ, ಕ್ಷೇತ್ರ ಮೇಳನಾಯಕನಕಟ್ಟೆ (ಅನುಸೂಚಿತ ಜಾತಿ(ಮಹಿಳೆ)). ಹೊನ್ನಾಳಿ ತಾಲ್ಲೂಕು ಪುನರ್ ರಚನೆಗೊಂಡಿರುವ ಹೆಚ್.ಕಡದಕಟ್ಟೆ ಗ್ರಾಮ ಪಂಚಾಯತ್‍ಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಅಕ್ಟೋಬರ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 18 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಅ.19 ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. ಅ.21 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನವಾಗಿದೆ. ಮತದಾನ ಅವಶ್ಯವಿದ್ದರೆ ಅ.28 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಅ.31 ರಂದು ಚುನಾವಣೆಯನ್ನು ಮುಕ್ತಾಯಗೊಳಿಸುವ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.