ದಾವಣಗೆರೆ: ಜಿಲ್ಲೆಯಲ್ಲಿ ಈವರೆಗೆ ಚರ್ಮಗಂಟು ರೋಗದಿಂದ (ಲಂಪಿ ಸ್ಕಿನ್ ಡಿಸೀಸ್) 22 ಜಾನುವಾರುಗಳು ಸಾವನ್ನಪ್ಪಿವೆ. ಹೆಚ್ಚಿನ ಜಾನುವಾರುಗಳು ಜಗಳೂರು ತಾಲ್ಲೂಕಿನ ರೈತರಿಗೆ ಸೇರಿದ್ದವಾಗಿವೆ.
ಇದೊಂದು ಅಂಟುರೋಗವಾಗಿದೆ. ಈ ರೋಗವು ಜಿಲ್ಲೆಯಲ್ಲಿ1,500 ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಜಗಳೂರು ತಾಲ್ಲೂಕಿನಲ್ಲಿ 6 ಎತ್ತು, 5 ಆಕಳು, ಹರಿಹರ ತಾಲ್ಲೂಕಿನಲ್ಲಿ 6 ಆಕಳು ಮತ್ತು 1 ಎತ್ತು, ದಾವಣಗೆರೆ ತಾಲ್ಲೂಕಿನಲ್ಲಿ 2 ಆಕಳು 1 ಎತ್ತು ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 1 ಎತ್ತು ಸೇರಿದಂತೆ ಒಟ್ಟು 22 ಜಾನುವಾರುಗಳು ಮೃತಪಟ್ಟಿವೆ.



